RNI NO. KARKAN/2006/27779|Saturday, February 14, 2026
You are here: Home » breaking news » ಬೆಳಗಾವಿ:ಕಾರು ಪಲ್ಟಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು , ಓರ್ವನಿಗೆ ಗಂಭೀರ ಗಾಯ : ಬೆಳಗಾವಿ ಹೊರ ವಲಯದಲ್ಲಿ ಘಟನೆ

ಬೆಳಗಾವಿ:ಕಾರು ಪಲ್ಟಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು , ಓರ್ವನಿಗೆ ಗಂಭೀರ ಗಾಯ : ಬೆಳಗಾವಿ ಹೊರ ವಲಯದಲ್ಲಿ ಘಟನೆ 

ಕಾರು ಪಲ್ಟಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು , ಓರ್ವನಿಗೆ ಗಂಭೀರ ಗಾಯ : ಬೆಳಗಾವಿ ಹೊರ ವಲಯದಲ್ಲಿ ಘಟನೆ

ಬೆಳಗಾವಿ ನ 5: ಕಾರು ಪಲ್ಟಿಯಾದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲಿ ಸಾವನ್ನಪ್ಪಿದ್ದು ಓರ್ವ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿಯ ಹೊರ ವಲಯದಲ್ಲಿ ನಡೆದಿದೆ
ಬೆಳಗಾವಿ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳು ಒಕ್ಸ್ ವ್ಯಾಗನ್ ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಕಾರು ಪಲ್ಟಿಯಾಗಿದೆ. ಪರಿಣಾಮ ಇದರಲ್ಲಿದ್ದ ವಿದ್ಯಾರ್ಥಿಗಳಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವನಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ಬೆಳಗಿನ ಜಾವ 2.45 ರ‌ ಸುಮಾರಿಗೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ

ನಿಶಾ(22), ಜಯಂತ್ ರಾಯ್(22) ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿಗಳು. ಅನಸುಮಾನ್ ಕುಮಾರ್‌ ಗಂಭೀರ ಗಾಯಗೊಂಡವರು. ಈ ಮೂವರು ಬಿಹಾರದ ಪಾಟ್ನಾ ಮೂಲದವರು ಎನ್ನಲಾಗಿದೆ. 

ಘಟನೆ ಸ್ಥಳಕ್ಕೆ ಹಿರೇಬಾಗೆವಾಡಿ ಪೊಲೀಸ್ ಇನ್ಸ್‌ಪೆಕ್ಟರ್ ಸಿ.ಎಸ್. ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Related posts: