RNI NO. KARKAN/2006/27779|Friday, November 6, 2026
You are here: Home » breaking news » ಘಟಪ್ರಭಾ:ಕಾಂಗ್ರೆಸ್ ಬಲವರ್ಧನೆಗೆ ಸಂಘಟನೆ ಸೃಜನ್ ಅಭಿಯಾನ : ಕೆಪಿಸಿಸಿ ಕಾರ್ಯದರ್ಶಿ ಸುಧಾಕರ್ ಬಡಿಗೇರ ಅಭಿಮತ

ಘಟಪ್ರಭಾ:ಕಾಂಗ್ರೆಸ್ ಬಲವರ್ಧನೆಗೆ ಸಂಘಟನೆ ಸೃಜನ್ ಅಭಿಯಾನ : ಕೆಪಿಸಿಸಿ ಕಾರ್ಯದರ್ಶಿ ಸುಧಾಕರ್ ಬಡಿಗೇರ ಅಭಿಮತ 

ಕಾಂಗ್ರೆಸ್ ಬಲವರ್ಧನೆಗೆ ಸಂಘಟನೆ ಸೃಜನ್ ಅಭಿಯಾನ : ಕೆಪಿಸಿಸಿ ಕಾರ್ಯದರ್ಶಿ ಸುಧಾಕರ್ ಬಡಿಗೇರ ಅಭಿಮತ

ಘಟಪ್ರಭಾ ನ 6 : ಬೂತ್‌ ಮಟ್ಟದಿಂದ ಕಾಂಗ್ರೆಸ್‌ ಪಕ್ಷದ ಬಲವರ್ಧನೆಗೆ ಪಕ್ಷದ ವತಿಯಿಂದ ರಾಜ್ಯಾದ್ಯಂತ ‘ಸಂಘಟನೆ ಸೃಜನ್‌ ಅಭಿಯಾನ – 2’ ಹಮ್ಮಿಕೊಳ್ಳಲಾಗಿದೆ. ಇದರ ಮೂಲಕ ನೂತನ ಕಾಂಗ್ರೆಸ್ ಬ್ಲಾಕ್ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕೂಡ ನಡೆಸಲಾಗುತ್ತಿದೆ’ ಎಂದು ಕೆಪಿಸಿಸಿ ಕಾರ್ಯದರ್ಶಿ ಅಭಿಯಾನದ ಸಹ ವೀಕ್ಷಕ ಸುಧಾಕರ ಬಡಿಗೇರ ತಿಳಿಸಿದರು.

ಇಲ್ಲಿನ ಸೇವಾದಳ ಸಭಾಂಗಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡ ಸಂಘಟನ ಸೃಜನ್ ಅಭಿಯಾನ-2 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಕ್ಷದ ಸಂಘಟನೆ, ಸ್ಥಳೀಯವಾಗಿ ಪಕ್ಷದ ಅಧಿಕಾರದ ಚುಕ್ಕಾಣಿ ಯಾರ ಕೈಗೆ ನೀಡಬೇಕೆಂಬ ಅಭಿಪ್ರಾಯ ದಾಖಲಿಸಲು ಪ್ರವಾಸ ಕೈಗೊಂಡಿದ್ದೇನೆ. ನಗರ ಮತ್ತು ವಿಧಾನಸಭಾ ಕ್ಷೇತ್ರದ ಪಕ್ಷದ ಎಲ್ಲಾ ಹಂತದ ಮುಖಂಡರು, ಕಾರ್ಯಕರ್ತರೊಂದಿಗೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿ ಪಾರದರ್ಶಕತೆಯಿಂದ ಆಯ್ಕೆ ಪ್ರಕ್ರಿಯೆಯನ್ನು ಪಕ್ಷ ನಡೆಸುತ್ತದೆ ಎಲ್ಲಾ ಕಾರ್ಯಕರ್ತರು ಅಭಿಯಾನದಲ್ಲಿ ಪಾಲ್ಗೊಂಡು ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಹೇಳಿದರು.

ಕಾಂಗ್ರೆಸ್ ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ಬಸವರಾಜ ಶೇಗಾಂವಿ ಮಾತನಾಡಿ ಕಾಂಗ್ರೆಸ್‌ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಇನ್ನಷ್ಟು ಬಲಿಷ್ಠ, ಪಾರದರ್ಶಕ ಹಾಗೂ ಪ್ರಜಾಸತ್ತಾತ್ಮಕಗೊಳಿಸುವ ಉದ್ದೇಶದಿಂದ ‘ಸಂಘಟನೆ ಸೃಜನ್‌ ಅಭಿಯಾನ’ ಆರಂಭಿಸಲಾಗಿದೆ. ಇದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ಅಭಿಲಾಷೆ. ಆಯಾ ತಾಲೂಕಿನಲ್ಲಿ ಮಹಿಳೆ, ಯುವಕರು, ಅಲ್ಪಸಂಖ್ಯಾತರು, ಆದಿವಾಸಿಗಳು, ಎಸ್‌ಸಿ/ಎಸ್‌ಟಿ, ಒಬಿಸಿ ಸೇರಿದಂತೆ ಆರು ಜನರನ್ನು ಒಳಗೊಂಡ ಸಮಿತಿ ರಚಿಸಲಾಗುವುದು. ಯಾರು ಬೇಕಾದರೂ ಪಕ್ಷದ ಬ್ಲಾಕ್ ಅಧ್ಯಕ್ಷರುಗಳ ಸ್ಥಾನಕ್ಕೆ ಅರ್ಜಿ ಸಲ್ಲಿಸಬಹುದು.ವಿಶೇಷವಾಗಿ ವಯಸ್ಕರಿಗೂ ಪಕ್ಷದಲ್ಲಿ ಆದ್ಯತೆ ನೀಡಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ ಎಂದು ಹೇಳಿದರು

ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಮಾತನಾಡಿ ರಾಜ್ಯಾದ್ಯಂತ ಸಂಘಟನ್ ಸೃಜನ್’ ಅಭಿಯಾನ ನಡೆಯುತ್ತಿದ್ದು, ಇದರ ಮೂಲಕ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೂ ವಿವಿಧ ಜವಾಬ್ದಾರಿ ಹಾಗೂ ಅಧಿಕಾರದ ಸ್ಥಾನಗಳನ್ನು ಪಡೆಯುವ ಅವಕಾಶ ದೊರೆಯಲಿದ್ದು, ಪಕ್ಷದ ಸಂಘಟನೆಯಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆ ವಿದ್ದರೆ ಪಕ್ಷದ ಗೆಲುವು ಖಚಿತ. ಕಾರ್ಯಕರ್ತರಿಗೆ ಕೆಲವೊಮ್ಮೆ ಶೂನ್ಯದಿಂದ ಪಕ್ಷ ಸಂಘಟನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅದನ್ನು ಸವಾಲಾಗಿ ಸ್ವೀಕರಿಸಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸಬೇಕು. ಪಕ್ಷಕ್ಕೆ ತನು ಮನದಿಂದ ದುಡಿದು ಹೋರಾಡಿ ಪಕ್ಷವನ್ನು ಸಂಘಟಿಸಬೇಕು. ಪಕ್ಷಕ್ಕೆ ಶಕ್ತಿ ತುಂಬು ಕಾರ್ಯ ಆಯ್ಕೆಯಾದ ಪಕ್ಷದ ಬ್ಲಾಕ್ ಅಧ್ಯಕ್ಷರುಗಳು ಮಾಡಬೇಕು.
ಕಾರ್ಯಕರ್ತರ ಅಭಿಪ್ರಾಯ ಕ್ಕೆ ಪೂರಕವಾಗಿ ವಿಕ್ಷಕರು ತಮ್ಮ ನಿಲುವನ್ನು ಪಕ್ಷದ ವರಿಷ್ಠರಿಗೆ ಒಪ್ಪಿಸಬೇಕು ಎಂದರು‌.

ಈ ಸಂದರ್ಭದಲ್ಲಿ ಬಾಗಲಕೋಟೆ ಜಿಪಂ ಮಾಜಿ ಅಧ್ಯಕ್ಷೆ ಮಾಯಕ್ಕ ಮೇಟಿ,ಗೋಕಾಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾಕೀರ ನಧಾಪ, ವಿವೇಕ ಜತ್ತಿ, ಇಮ್ರಾನ್ ತಪಕೀರ, ಪ್ರವೀಣ್ ತುಕ್ಕಾನಟ್ಟಿ ಉಪಸ್ಥಿತರಿದ್ದರು.

 

Related posts: