RNI NO. KARKAN/2006/27779|Sunday, November 1, 2026
You are here: Home » breaking news » ಗೋಕಾಕ:ಸಾಹಿತ್ಯದ ಜೊತೆಗೆ ಸಾಂಸ್ಕೃತಿಕವಾಗಿ ಕನ್ನಡವನ್ನು ಶ್ರೀಮಂತ ಗೊಳಿಸುವ ಕೆಲಸ ಎಲ್ಲಾ ಕನ್ನಡಿಗರು ಮಾಡಬೇಕು : ಡಾ.ಮೋಹನ ಭಸ್ಮೆ

ಗೋಕಾಕ:ಸಾಹಿತ್ಯದ ಜೊತೆಗೆ ಸಾಂಸ್ಕೃತಿಕವಾಗಿ ಕನ್ನಡವನ್ನು ಶ್ರೀಮಂತ ಗೊಳಿಸುವ ಕೆಲಸ ಎಲ್ಲಾ ಕನ್ನಡಿಗರು ಮಾಡಬೇಕು : ಡಾ.ಮೋಹನ ಭಸ್ಮೆ 

ಸಾಹಿತ್ಯದ ಜೊತೆಗೆ ಸಾಂಸ್ಕೃತಿಕವಾಗಿ ಕನ್ನಡವನ್ನು ಶ್ರೀಮಂತ ಗೊಳಿಸುವ ಕೆಲಸ ಎಲ್ಲಾ ಕನ್ನಡಿಗರು ಮಾಡಬೇಕು : ಡಾ.ಮೋಹನ ಭಸ್ಮೆ

ಗೋಕಾಕ ನ 1 : ಕನ್ನಡ ಭಾಷೆಯನ್ನು ಸಾಹಿತ್ಯದ ಜೊತೆಗೆ ಸಾಂಸ್ಕೃತಿಕವಾಗಿವು ಶ್ರೀಮಂತಗೋಳಿಸುವ ಕೆಲಸ ಎಲ್ಲಾ ಕನ್ನಡಿಗರು ಮಾಡಬೇಕು ಎಂದು ತಹಶೀಲ್ದಾರ ಡಾ‌.ಮೋಹನ ಭಸ್ಮೆ ಹೇಳಿದರು.

ರವಿವಾರದಂದು ನಗರದ ಶ್ರೀ ಮಹರ್ಷಿ ವಾಲ್ಮೀಕಿ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ನಗರಸಭೆ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 71ನೇ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು.

ನವೆಂಬರ್ 1 ಬಂದರೆ ಮಾತ್ರ ಕನ್ನಡ ಹಬ್ಬವನ್ನು ಆಚರಿಸದೆ ವರ್ಷವಿಡಿ ಕನ್ನಡವನ್ನು ಆರಾಧಿಸುವ ಕನ್ನಡಿಗರಾಬೇಕು.
ಕನ್ನಡವನ್ನು ಮನಸ್ಸಿನಲ್ಲಿ ತುಂಬಿಕೊಂಡು ಅದನ್ನು ಅನುಷ್ಠಾನ ಮಾಡವು ಕಾರ್ಯನಾವೆಲ್ಲರೂ ಮಾಡಬೇಕು. ಸ್ವಾಭಿಮಾನದ ಕಿಚ್ಚು ಪ್ರತಿಕ್ಷಣ ನಮ್ಮಲ್ಲಿ ಇರಬೇಕು.

ಕರ್ನಾಟಕವು ಒಂದು ಚಿಕ್ಕ ಭಾರತವಾಗಿದ್ದು, ಅಷ್ಟೊಂದು ಸಂಪತ್ಭರಿತ ರಾಜ್ಯ ನಮ್ಮದಾಗಿದೆ. ವಿಶೇಷವಾಗಿ ನಮ್ಮ ನಾಡಿನ ಜಾನಪದ ಸೋಗಡು ಬಹಳ ಅರ್ಥಗರ್ಭೀತವಾಗಿದೆ. ನಾಡಿಗಾಗಿ ಏನಾದರೂ ಮಾಡಬೇಕು ಎಂದು ಸಂಕಲ್ಪ ಮಾಡಿದರೆ ಖಂಡಿತವಾಗಿಯೂ ಕನ್ನಡ ನಾಡಿಗೆ ಒಂದಿಷ್ಟು ಕೊಡುಗೆ ನೀಡುವ ನಿಟ್ಟಿನಲ್ಲಿ ನಾವು ಸಾಧನೆ ಮಾಡಬಹುದು ಎಂದು ಹೇಳಿದರು.


ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸತ್ಕರಿಸಲಾಯಿತು ಹಾಗೂ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಸಪ್ರಶ್ನೆ ,ಪ್ರಬಂಧ , ರಂಗೋಲಿ ಸ್ವರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ಡಿ.ವಾಯ್.ಎಸ್.ಪಿ ರವಿ ನಾಯಕ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತೆ, ನಗರಸಭೆ ಪೌರಾಯುಕ್ತ ರವಿ ರಂಗಸುಭೆ, ಬಿಇಒ ಜಿ.ಬಿ.ಬಳಗಾರ, ಕೃಷಿ ಅಧಿಕಾರಿ ಎಂ.ಎಂ.ನಧಾಫ, ಎಸ್.ಪಿ‌‌.ವರಾಳೆ, ಪಿಎಸ್ಐ ಕಿರಣ ಮೋಹಿತೆ, ಶಿಶು ಅಭಿವೃದ್ಧಿ ಅಧಿಕಾರಿ ಡಿ.ಎಸ್.ಕೂಡವಕ್ಕಲಿಗ, ಡಾ.ಮೋಹನ ಕಮತ, ಎಂ.ಎಚ್.ಗಜಾಕೋಶ, ಎನ್.ಬಿ. ಜನ್ಮಟ್ಟಿ, ಮುಖಂಡರುಗಳಾದ ಅಶೋಕ ಪೂಜಾರಿ, ಸೋಮಶೇಖರ್ ಮಗದುಮ್ಮ, ಕರವೇ ಅಧ್ಯಕ್ಷರುಗಳಾದ ಬಸವರಾಜ ಖಾನಪ್ಪನರ, ಕಿರಣ ಢಮಾಮಗರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: