ಗೋಕಾಕ:ರಾಯಣ್ಣ ಮತ್ತು ಚೆನ್ನಮ್ಮನ ನಾಡಿನಲ್ಲಿ ನಿಂತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜಕಾರಣ ಮಾಡಿದ್ದಾರೆ : ಶಶಿಕಾಂತ ಗುರೂಜಿ

ರೈತ ಮುಖಂಡರ ಬಂಧನ ಖಂಡಿಸಿ ಗೋಕಾಕದಲ್ಲಿ ರಸ್ತೆ ತಡೆದು ಪ್ರತಿಭಟನೆ.
ರಾಯಣ್ಣ ಮತ್ತು ಚೆನ್ನಮ್ಮನ ನಾಡಿನಲ್ಲಿ ನಿಂತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜಕಾರಣ ಮಾಡಿದ್ದಾರೆ : ಶಶಿಕಾಂತ ಗುರೂಜಿ

ಗೋಕಾಕ ನ 5 : ಕಬ್ಬಿಗೆ ಬೆಂಬಲ ಬೆಲೆ ಘೋಷಿಸುವಂತೆ ನಡೆಯುತ್ತಿರುವ ಹೋರಾಟದ ಸಂಧರ್ಭದಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ, ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವದನ್ನು ಖಂಡಿಸಿ ಇಲ್ಲಿನ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಕರ್ತರು ನಗರದ ನಾಕಾ ನಂ.1 ರಲ್ಲಿ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಮಾಡಿ, ವಶಕ್ಕೆ ಪಡೆದ ರೈತ ಮುಖಂಡರನ್ನು ಕೂಡಲೇ ಬಿಡುಗಡೆ ಮಾಡುವಂತೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಗುರುವಾರದಂದು ಬೆಳಿಗ್ಗೆ ಪೊಲೀಸರು ರೈತ ಮುಖಂಡರನ್ನು ವಶಕ್ಕೆ ಪಡೆಯುತ್ತಿದ್ದಂತೆ ನಾಕಾ ನಂ 1 ರಲ್ಲಿ ಸೇರಿದ ನೂರಾರು ರೈತರು, ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಆದಷ್ಟು ಬೇಗ್ 1 ಟನ್ ಕಬ್ಬಿಗೆ 5,500 ಬೆಲೆಯನ್ನು ನಿಗದಿಪಡಿಸಿ, ಸಕ್ಕರೆ ಕಾರಖಾನೆಗಳನ್ನು ಪ್ರಾರಂಭಿಸಬೇಕು. ಚೂನಪ್ಪ ಪೂಜೇರಿ ಮತ್ತು ಶಶಿಕಾಂತ ಗುರೂಜಿ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರ ಕಣ್ಣನಲ್ಲಿ ರಕ್ತ ಹರಿಸುವ ಕಾರ್ಯಮಾಡುತ್ತಿವೆ. ರಾಜಕಾರಣಿಗಳು ರೈತರ ಜೊತೆ ಚಲ್ಲಾಟವಾಡುತ್ತಿದ್ದು, ರೈತ ಹೋರಾಟವನ್ನು ಹತ್ತಿಕ್ಕಿವ ಕೆಲಸ ಮಾಡುತ್ತಿರುವುದು ತರವಲ್ಲ ಆದಷ್ಟು ಬೇಗ ರೈತರ ಬೆಳೆದಂತಹ ಕಬ್ಬಿಗೆ ಬೆಂಬಲ ಬೆಲೆ ಘೋಷಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ರೈತ ಮುಖಂಡರು ಸರಕಾರವನ್ನು ಆಗ್ರಹಿಸಿದರು.
ಮಧ್ಯಾಹ್ನದ ಹೊತ್ತಿಗೆ ಪೊಲೀಸರಿಂದ ಬಿಡುಗೊಂಡ ಬಳಿಕ ನಗರದ ಬಸವೇಶ್ವರ ವೃತ್ತಕ್ಕೆ ಆಗಮಿಸಿ ರೈತರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಸಂಗೋಳ್ಳಿ ರಾಯಣ್ಣ ಮತ್ತು ಚೆನ್ನಮ್ಮನ ನಾಡಿನಲ್ಲಿ ನಿಂತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜಕಾರಣ ಮಾಡಿದ್ದಾರೆ. ಗುಂಡರಾವ ಸರಕಾರ ಪತನವಾದಂತೆ ಡಿ.ಕೆ. ಶಿವಕುಮಾರ್ ಸರಕಾರ ಸಹ ಪತನವಾಗುವುದು ಶತಸಿದ್ಧ. ಈ ರಾಜ್ಯ ಕಂಡ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಆಗಿದ್ದಾರೆ.
ಪಕ್ಷಾತೀತವಾಗಿ, ಜಾತ್ಯಾತೀತವಾಗಿ ರೈತರ ಈ ಹೋರಾಟದಲ್ಲಿ ಭಾಗವಹಿಸಿ ಸಾರ್ವಜನಿಕರು ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ ಅದನ್ನು ಸಹಿಸಲಾರದೆ ಸರಕಾರ ರೈತ ಹೋರಾಟಗಾರರನ್ನು ಬಂಧಿಸುವುದು ಸರಿಯಾದ ಕ್ರಮವಲ್ಲ ಆದಷ್ಟು ಬೇಗ ರೈತ ಹೋರಾಟಕ್ಕೆ ಜಯಸಿಗಲಿದೆ ಎಂದ ಅವರು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿವೇಶನ ಹೇಗೆ ನಡೆಸುತ್ತಾರೆ ನಾವು ನೋಡುತ್ತೇವೆ ಎಂದು ಸರಕಾರವನ್ನು ಎಚ್ಚರಿಸಿದರು.
ನಾಕಾ.ನಂ 1 ಸಂಕೇಶ್ವರ- ಯರಗಟ್ಟಿ ರಾಜ್ಯ ಹೆದ್ದಾರಿಯನ್ನು ರೈತರು ಬಂದ್ ಮಾಡಿದ್ದ ಕಾರಣ ಬೇರೆ ಊರಿಗೆ ಹೋಗುವ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ರಸ್ತೆ ತಡೆವಾದ್ದರಿಂದ ವಾಹನ ಸವಾರರು ಮಾರ್ಗ ಬದಲಿಸಿ ತಮ್ಮ, ತಮ್ಮ ಊರುಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಯಿತು.
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ವಾಸು ಪಂಡರೋಳ್ಳಿ, ಮಂಜುನಾಥ್ ಪೂಜೇರಿ, ರಾಯಪ್ಪ ಗೌಡಪ್ಪನವರ, ಕುಮಾರ ತಿಗಡಿ, ಯಲಪ್ಪ ಅರಭಾವಿ, ಮಾಯಪ್ಪ ಹೆಗಡೆ, ಪ್ರಕಾಶ್ ಹಾಲನ್ನವರ, ರಮೇಶ ತಿಗಡಿ, ಹಾಲಪ್ಪ ವಾಲಿಕರ, ಯಕ್ಕಂಪ್ಪ ಜರಕಿನ್ ,ಬಸು ಪವಾಡಿ, ಸುರೇಶ ಸಂಪಗಾವಿ ಸೇರಿದಂತೆ ನೂರಾರು ಮುಖಂಡರು ಉಪಸ್ಥಿತರಿದ್ದರು.
