ಗೋಕಾಕ:ಕಲಾಪ ಬಹಿಷ್ಕರಿಸಿ ರಸ್ತೆಗಿಳಿದು ವಕೀಲರ ಪ್ರತಿಭಟನೆ

ಕಲಾಪ ಬಹಿಷ್ಕರಿಸಿ ರಸ್ತೆಗಿಳಿದು ವಕೀಲರ ಪ್ರತಿಭಟನೆ
ಗೋಕಾಕ ನ 3 : ಕರ್ನಾಟಕ ರಾಜ್ಯದಲ್ಲಿ ವಕೀಲರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ನಿಯಂತ್ರಣಕ್ಕಾಗಿ ವಕೀಲರ ಹಿತರಕ್ಷಣಾ ಕಾಯ್ದೆಯನ್ನು ಇನ್ನಷ್ಟು ಕಠಿಣಗೊಳಿಸುವಂತೆ ಆಗ್ರಹಿಸಿ ಮಂಗಳವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು, ಬೆಂಗಳೂರು ವಕೀಲರ ಸಂಘ ಹಾಗೂ ಜಿಲ್ಲಾ ವಕೀಲರ ಸಂಘ ಕರೆ ನೀಡಿದ್ದ ಕರ್ನಾಟಕ ರಾಜ್ಯ ವಕೀಲರ ಪ್ರತಿಭಟನೆಯನ್ನು ಬೆಂಬಲಿಸಿ ಇಲ್ಲಿನ ವಕೀಲರ ಸಂಘದ ಪದಾಧಿಕಾರಿಗಳು ಕಲಾಪ ಬಹಿಷ್ಕರಿಸಿ ರಸ್ತೆಗಿಳಿದು ಪ್ರತಿಭಟನೆ ನಡೆಯಿಸಿ, ತಹಶೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಸುಭಾಷಚಂದ್ರ ಬಿ.ಪಾಟೀಲ ಸಂವಿಧಾನದ ಎರಡನೇ ಅಂಗವಾಗಿ ಕಾರ್ಯ ನಿರ್ವಹಿಸುತ್ತಿರುವ ವಕೀಲರ ಮೇಲೆ ಪದೇ ಪದೇ ಹಲ್ಲೆ ನಡೆಯುತ್ತಿರುವುದು ವಿಷಾದನೀಯ. ಭಾರತದಲ್ಲಿ ವಕೀಲರಿಗೆ ತನ್ನದೇ ಆದ ಘನತೆ ಗೌರವವಿದೆ. ರಾಜ್ಯದ ಹಲವು ಕಡೆ ವಕೀಲರ ಮೇಲೆ ನಿರಂತರ ಹಲ್ಲೆ ಆಗುದನ್ನು ತಡೆದು,ಈಗಾಗಲೇ ಜಾರಿಯಲ್ಲಿರುವ ವಕೀಲರ ಹಿತರಕ್ಷಣಾ ಕಾಯ್ದೆಯನ್ನು ಇನ್ನಷ್ಟು ಕಠಿಣಗೊಳಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಶಶಿಧರ ದೇಮಶೆಟ್ಟಿ , ವಿ.ವಾಯ್.ಜಾಗನೂರ, ಬಿ.ಆರ್.ದಂಡಿನ, ವಿ.ಬಿ.ಮೆಳವಂಕಿ, ಎಸ್.ಬಿ.ವಡೆರಟ್ಟಿ, ಎ.ಸಿ.ಕಂಡರಟ್ಟಿ, ವಿ.ಜಿ.ಸಿದ್ದಾಪೂರಮಠ, ಸಿ.ಡಿ.ಹುಕ್ಕೇರಿ, ಬಸವರಾಜ ಕೋಟಗಿ, ಶಂಕರ ಗೋರೋಶಿ, ಆರ್.ಎಸ್.ನಿಡಸೋಸಿ, ಬಿ.ಎಚ್.ಮುಲ್ಲಾ, ಎಂ.ಆರ್.ನಿಡಸೋಸಿ, ಎ.ಬಿ.ಬೆಟಗೇರಿ, ಪಿ.ಎಂ.ಚಿಕ್ಕೋಡಿ, ರಾಮೇಶ್ವರ ಕಲ್ಯಾಣಶೆಟ್ಟಿ, ಚೇತನ್ ಖಡಕಭಾವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
