ಗೋಕಾಕ:ದಿ.ಘಟಪ್ರಭಾ ಸಹಕಾರಿ ಸಕ್ಕರೆ ಕಾರಖಾನೆಯ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ

ದಿ.ಘಟಪ್ರಭಾ ಸಹಕಾರಿ ಸಕ್ಕರೆ ಕಾರಖಾನೆಯ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ
ಗೋಕಾಕ ನ 7 : ದಿ.ಘಟಪ್ರಭಾ ಸಹಕಾರಿ ಸಕ್ಕರೆ ಕಾರಖಾನೆಯ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಅರಭಾಂವಿ ದುರದುಂಡೇಶ್ವರ ಮಠದ ಶ್ರೀ ಗುರುಬಸವಲಿಂಗ ಮಹಾಸ್ವಾಮಿಗಳು ಶನಿವಾರದಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ಆಡಳಿತ ಮಂಡಳಿ ಚೇರಮನ ಶಿದ್ಲಿಂಗಪ್ಪ ಕಂಬಳಿ, ಸೈದಪ್ಪ ಗದಾಡಿ, ಜಯಶೀಲ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕಿ ಶಾಹೀನ ಅಖ್ತರ, ಉಪಾಧ್ಯಕ್ಷ
ಮಲ್ಲಿಕಾರ್ಜುನ ಕಬ್ಬೂರ, ನಿರ್ದೇಶಕರುಗಳಾದ ಬಸನಗೌಡ ಪಾಟೀಲ, ಕೆಂಚನಗೌಡ ಪಾಟೀಲ, ಗಿರೀಶ ಹಳ್ಳೂರ, ಮಹಾದೇವಪ್ಪ ಭೋವಿ, ಭೂತಪ್ಪ ಗೋಡೇರ, ಮಾಳಪ್ಪ ಜಾಗನೂರ, ಲಕ್ಷ್ಮಣ ಗಣಪ್ಪಗೋಳ, ಶಿವಲಿಂಗಪ್ಪ ಪೂಜೇರಿ, ಜಗದೀಶ ಬಂಡ್ರೋಳಿ, ಅರುಣ ಮಹಾರೆಡ್ಡಿ, ಆರೀಫ ಪೀರಜಾದೆ, ಅಲ್ಲಪ್ಪ ಗುಡೇನ್ನವರ, ಲಕ್ಕವ್ವ ಬೆಳಗಲಿ, ವಿನೀತ ಪಾಟೀಲ ಇದ್ದರು.
