ಗೋಕಾಕ:ಆದೋಂಲನ ರೀತಿಯಲ್ಲಿ ಸರಕಾರಿ ಶಾಲೆಗಳನ್ನು ಉಳಿಸುವ ಕಾರ್ಯ ಮಾಡಬೇಕು : ಶ್ರೀಮತಿ ರೇವತಿ ಮಠದ

ಆದೋಂಲನ ರೀತಿಯಲ್ಲಿ ಸರಕಾರಿ ಶಾಲೆಗಳನ್ನು ಉಳಿಸುವ ಕಾರ್ಯ ಮಾಡಬೇಕು : ಶ್ರೀಮತಿ ರೇವತಿ ಮಠದ
ಗೋಕಾಕ ಮೇ 17 : ಆದೋಂಲನ ರೀತಿಯಲ್ಲಿ ಸರಕಾರಿ ಶಾಲೆಗಳನ್ನು ಉಳಿಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾ ಭೋಜನಾಧಿಕಾರಿ ಶ್ರೀಮತಿ ರೇವತಿ ಮಠದ ಹೇಳಿದರು
ಶನಿವಾರದಂದು ನಗರದ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಜಿಲ್ಲಾ ಪಂಚಾಯತ್ ಬೆಳಗಾವಿ, ಶಾಲಾ ಶಿಕ್ಷಣ ಇಲಾಖೆ ,ತಾಲೂಕು ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಗೋಕಾಕ ಹಾಗೂ ಪಿ.ಎಮ್.ಶ್ರೀ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯ ಫ್ರೌಢ ಮತ್ತು ಕಾಲೇಜು ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು
ಅಂಕಗಳು ಜೀವನವನ್ನು ರೂಪಿಸುವುದಿಲ್ಲ ಅವು ಬರೀ ಒಂದು ತರಗತಿಯಿಂದ ಇನ್ನೊಂದು ತರಗತಿಗೆ ಹೋಗಲು ಸಹಕಾರಿಯಾಗಿರುತ್ತವೆ. ಮಕ್ಕಳನ್ನು ಹೆಚ್ಚು ಅಂಕಗಳಿಸುವಂತೆ ಒತ್ತಡ ಹಾಕಬಾರದು . ಪಾಲಕರು,ಬಾಲಕರು ಮತ್ತು ಶಿಕ್ಷಕರು ಎಲ್ಲರೂ ಕೂಡಿ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು. ಮಕ್ಕಳು ಎಂದರೆ ಭವಿಷ್ಯದ ರೂವಾರಿಗಳು ಅವರನ್ನು ರೂಪಿಸುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ ಎಂದ ಅವರು ಮಕ್ಕಳ ಹಕ್ಕುಗಳು ಉಲ್ಲಂಘನೆ ಆಗದಂತೆ ಪಾಲಕರು ನೋಡಿಕೊಳ್ಳಬೇಕು. ಭಾಷೆ ಎಂದರೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವ ದಾರಿಯಾಗಿದೆ.ಮಕ್ಕಳ ಒತ್ತಡವನ್ನು ಅರಿತು ಅವರ ಮನಸ್ಥಿತಿಯನ್ನು ಅರಿತು ಶಿಕ್ಷಣ ನೀಡಬೇಕು. ಮಕ್ಕಳಿಗೆ ಒತ್ತಡ ರಹಿತ ಶಿಕ್ಷಣ ನೀಡುವಲ್ಲಿ ಪಾಲಕರು ಮತ್ತು ಶಿಕ್ಷಕರು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಿ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡಬೇಕು. ನಮಗೆ ಇಂದು ಸರಕಾರಿ ಸೌಲಭ್ಯಗಳು ಬೇಕು ಆದರೆ ಸರಕಾರಿ ಶಾಲೆಗಳು ಬೇಡ ಎಂಬ ಭಾವನೆಯನ್ನು ತಗೆದುಹಾಕಿ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ನಾವೆಲ್ಲರೂ ಮುಂದಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಿ, ಗೌರವಿಸಲಾಯಿತು.
ವೇದಿಕೆಯಲ್ಲಿ ತಹಶೀಲ್ದಾರ್ ಡಾ.ಮೋಹನ ಭಸ್ಮೆ, ಪ್ರಾಚಾರ್ಯ ಎಲ್.ಎ. ಅಂತರಗಟ್ಟಿ, ಪರುಶುರಾಮ ಘಸ್ತೆ, ಆರ್.ಡಿ.ತೇರದಾಳ, ಪ್ರಕಾಶ ಹಿರೇಮಠ , ಎಸ್.ವ್ಹಿ.ಕುಲಕರ್ಣಿ, ಮಹೆಬೂಬ ಬಳಗಾರ ಉಪಸ್ಥಿತರಿದ್ದರು.