RNI NO. KARKAN/2006/27779|Saturday, January 31, 2026
You are here: Home » breaking news » ಗೋಕಾಕ:ಭಾರತ ಮಾನವ ಜನಾಂಗದ ತೋಟ್ಟಿಲು : ಶಿಕ್ಷಕ ಅಶೋಕ ಹಂಚಾಳಿ

ಗೋಕಾಕ:ಭಾರತ ಮಾನವ ಜನಾಂಗದ ತೋಟ್ಟಿಲು : ಶಿಕ್ಷಕ ಅಶೋಕ ಹಂಚಾಳಿ 

ಭಾರತ ಮಾನವ ಜನಾಂಗದ ತೋಟ್ಟಿಲು : ಶಿಕ್ಷಕ ಅಶೋಕ ಹಂಚಾಳಿ
ಗೋಕಾಕ ಜ 31 : ಭಾರತ ಮಾನವ ಜನಾಂಗದ ತೋಟ್ಟಿಲು ಎಂದು ಶಿಕ್ಷಕ, ಬಸವನ ಬಾಗೇವಾಡಿಯ ಅಶೋಕ ಹಂಚಾಳಿ ಹೇಳಿದರು‌

ಶನಿವಾರದಂದು ನಗರದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಚೆನ್ನಬಸವೇಶ್ವರ ಕನ್ನಡ, ಆಂಗ್ಲ ಹಾಗೂ ಬಿಸಿಎ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನದವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತವೆಂದರೆ ಬರೀ ಭೂಗೋಳವಲ್ಲ, ಬರೀ ದೇಶವಲ್ಲ ಅದು ಪವಿತ್ರ ಭೂವಿಯಾಗಿದ್ದು, ಅಸಂಖ್ಯಾತ ಶಕ್ತಿಗಳ ಮಹಾನ ಚೇತನವಾಗಿದೆ ಎಂದರು.
ತಾಯಿ ಮನಸ್ಸು ಮಾಡಿದರೆ ಶ್ರೇಷ್ಠ ಸಾಧಕರನ್ನು ದೇಶಕ್ಕೆ ಕೊಡುಗೆಯಾಗಿ ನೀಡಬಹುದು ಅಂತ ಶಕ್ತಿ ತಾಯಿಯಲ್ಲಿದೆ. ತಮ್ಮ ಮಕ್ಕಳನ್ನು ಒಳ್ಳೆಯವರನ್ನಾಗಿ ಮಾಡುವಲ್ಲಿ ಪಾಲಕರ ಪಾತ್ರ ಏನು ಎಂಬುದನ್ನು ಒಂದು ಸಾರಿ ಯೋಚಿಸಿ ಅವರ ಆಶೋತ್ತರಗಳಿಗೆ ಸ್ವಂದಿಸಿ ಅವರನ್ನು ಸಾಧಕರನ್ನಾಗಿ ಮಾಡಬೇಕು ಎಂದ ಅವರು ಮೊದಲು ಪಾಲಕರು ಮೊಬೈಲ್ ನ ಬಳಕೆ ಕಡಿಮೆಮಾಡಿ ಮಕ್ಕಳನ್ನು ಮೊಬೈಲ್ ಬಳಕೆ ಮಾಡದಂತೆ ನೋಡಿಕೊಂಡರೆ ಅದುವೇ ದೊಡ್ಡ ಪುಣ್ಯ ಆ ದಿಸೆಯಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಯಾವುದನ್ನು ಕೊಡಬೇಕು, ಯಾವುದನ್ನು ಬಿಡಬೇಕು ಎಂಬುದನ್ನು ಯೋಚಿಸಿದರೆ ಅವರನ್ನು ಸಾಧಕರ ಸಾಲಿನಲ್ಲಿ ನಿಲ್ಲಿಸಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಮತ್ತು ಅತ್ಯುತ್ತಮ ವಿದ್ಯಾರ್ಥಿ, ವಿದ್ಯಾರ್ಥಿನಿಗೆ ಸತ್ಕರಿಸಿ, ಗೌರವಿಸಲಾಯಿತು ಮತ್ತು ಬಿಸಿಎ ಮೂರು ವರ್ಷದಲ್ಲಿ 90% ಪತ್ರಿಶತ ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ ತಾವು ಭರಿಸಿದ ತಲಾ 84 ಸಾವಿರ ಹಣವನ್ನು ಮರಳಿ ಕೊಡಲಾಯಿತು .
ಈ ಸಂದರ್ಭದಲ್ಲಿ ರಾಣಿ ಚನ್ನಮ್ಮಾ ವಿಶ್ವ ವಿದ್ಯಾಲಯದ ಡಾ.ಅಶ್ವಿನಿ ಜಾಮೂನಿ, ಸಂಸ್ಥೆಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಈಟಿ, ಮಲ್ಲಿಕಾರ್ಜುನ ರೋಟ್ಟಿ, ಶಂಕರ ಗೋರೋಶಿ, ಬಸನಗೌಡ ಪಾಟೀಲ, ಡಾ.ವಿಶ್ವನಾಥ್ ಶಿಂಧೋಳಿಮಠ, ಡಾ.ಸಿ.ಕೆ.ನಾವಲಗಿ, ವಿವೇಕ ಜತ್ತಿ, ಶ್ರೀಮತಿ ವೀಣಾ ಹಿರೇಮಠ, ಸುಷ್ಮಾ ಪಾಟೀಲ, ಪ್ರಾಚಾರ್ಯ ಎಸ್.ಕೆ.ಮಠದ, ವಿದ್ಯಾರ್ಥಿ ಪ್ರತಿನಿಧಿಗಳಾದ ಮಂಜುನಾಥ ಬೀದರಿ, ಅನುರಾಧಾ ಕುರಿ, ತನುಷ್ಕಾ ಸಾಳುಂಕೆ, ಅರುಣ ನಾಡಗೌಡ ಉಪಸ್ಥಿತರಿದ್ದರು.

Related posts: