RNI NO. KARKAN/2006/27779|Monday, February 2, 2026
You are here: Home » breaking news » ಗೋಕಾಕ:ಶರಣ ಸಂಸ್ಕೃತಿ ಉತ್ಸವ ಗೋಕಾಕ ನಾಡಿನ ಹೆಮ್ಮೆ : ಶಾಸಕ ರಮೇಶ ಜಾರಕಿಹೊಳಿ

ಗೋಕಾಕ:ಶರಣ ಸಂಸ್ಕೃತಿ ಉತ್ಸವ ಗೋಕಾಕ ನಾಡಿನ ಹೆಮ್ಮೆ : ಶಾಸಕ ರಮೇಶ ಜಾರಕಿಹೊಳಿ 

ಶರಣ ಸಂಸ್ಕೃತಿ ಉತ್ಸವ ಗೋಕಾಕ ನಾಡಿನ ಹೆಮ್ಮೆ : ಶಾಸಕ ರಮೇಶ ಜಾರಕಿಹೊಳಿ
ಗೋಕಾಕ ಫೆ 1 : ನಗರದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ವಿರತ ಪರಿಶ್ರಮದಿಂದ ಕಳೆದ 2 ದಶಕಗಳಿಂದ ಶರಣ ಸಂಸ್ಕೃತಿ ಉತ್ಸವ ಅತೀ ವಿಜಂಭ್ರನೆಯಿಂದ ನಡೆಯುತ್ತಿರುವುದು ನಾಡಿಗೆ ಹೆಮ್ಮಯ ವಿಷಯವಾಗಿದೆ ಎಂದು ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.

ರವಿವಾರದಂದು ನಗರದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಲಿಂಗೈಕ್ಯ ಶ್ರೀ ಬಸವ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡ 21ನೇ ಶರಣ ಸಂಸ್ಕೃತಿ ಉತ್ಸವದ ಷಟಸ್ಥಳ ಧ್ವಜಾರೋಹಣ ನೆರೆವೇರಿಸಿ ಅವರು ಮಾತನಾಡಿದರು.

ಗೋಕಾಕನ ಶ್ರೀ ಮಠವು ಸದಾ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರಮವಹಿಸಿ ಮಾಡುತ್ತಿರುವ ಪರಿಣಾಮ ಈ ಭಾಗದಲ್ಲಿ ಧಾರ್ಮಿಕ ಜಾಗೃತಿ ಹರಡುತ್ತಿದೆ.
ಗೋಕಾಕ ನಗರದ ಸೌಂದರ್ಯಿಕರಣಕ್ಕೆ ನಾನು ಸತತ ಪ್ರಯತ್ನ ಮಾಡುತ್ತಿದ್ದು, ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಗೋಕಾಕ ನಗರ ಮತ್ತು ಮತಕ್ಷೇತ್ರವನ್ನು ಅಭಿವೃದ್ಧಿ ಪಡೆಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನಾನು ಜಲಸಂಪನ್ಮೂಲ ಸಚಿವನಿದ್ದಾಗ ಗೋಕಾಕ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೆ ಅವುಗಳಲ್ಲಿ ಕೆಲವು ಯೋಜನೆಗಳು ಅನುಷ್ಠಾನಗೊಂಡಿದ್ದು, ಇನ್ನು ಕೆಲವು ಕಾರಣಾಂತರಗಳಿಂದ ಅನುಷ್ಠಾನಕ್ಕೆ ಬಂದಿಲ್ಲ ಮುಂದಿನ ದಿನಗಳಲ್ಲಿ ನಮ್ಮ ಸರಕಾರ ಬಂದರೆ ಮುತುವರ್ಜಿ ವಹಿಸಿ ಅವುಗಳನ್ನು ಅನುಷ್ಠಾನ ಗೊಳಿಸಲಾಗುವದು ಎಂದು ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿ ಮಾತನಾಡಿದ ಜಮಖಂಡಿಯ ಓಲೆಮಠದ ಶ್ರೀ ಆನಂದ ದೇವರು ಶರಣ ಸಂಸ್ಕೃತಿ ಉತ್ಸವ ನೋಡಬೇಕಾದರೆ ಗೋಕಾಕ ನಗರಕ್ಕೆ ಬರುವ ಹಾಗೆ ಶರಣ ಸಂಸ್ಕೃತಿ ಕಳೆದ 21 ವರ್ಷಗಳಿಂದ ನಡೆಸುತ್ತಾ ಬಂದಿರುವ ಶ್ರೀಗಳ ಕಾರ್ಯ ಇತರರಿಗೆ ಮಾದರಿಯಾಗಿದೆ. ಮುಕ್ತಿ ಕಡೆ ಹೋಗಬೇಕಾದರೆ ಬಸವ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು. ಶರಣ ಧರ್ಮ, ಲಿಂಗಾಯತ ಧರ್ಮ ದಯೆಯಿಂದ ಕೂಡಿದ ಧರ್ಮವಾಗಿದೆ. ವಚನ ಸಾಹಿತ್ಯದಿಂದ ಕನ್ನಡ ಭಾಷೆಯ ಕೀರ್ತಿ ಹೆಚ್ಚಾಗಿದ್ದು, 12 ಶತಮಾನದಲ್ಲಿ ಬಸವಣ್ಣನವರ ಕ್ರಾಂತಿಯಿಂದ ಇಂದು ಹೆಣ್ಣಿಗೆ ಗೌರವ ಸಿಗುತ್ತಿದೆ ಎಂದ ಅವರ ಅವರ ತತ್ವವನ್ನು ಗೋಕಾಕ ನಗರದ ಶೂನ್ಯ ಸಂಪಾದನ ಪಾಲಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದ ನೇತೃತ್ವವನ್ನು ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ಇದಕ್ಕೂ ಮೊದಲು ಅಕ್ಷರ, ಅರಿವು, ಆರೋಗ್ಯ ಕಾರ್ಯಕ್ರಮದ ಜಾಥಾವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಜಾಗೃತಿ ಮೂಡಿಸಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ, ಶರಣ ಸಂಸ್ಕೃತಿ ಉತ್ಸವ ಸಮಿತಿಯ ಅಧ್ಯಕ್ಷ ಶಂಕರ ಗೋರೋಶಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಉಳ್ಳಾಗಡ್ಡಿ, ಚಂದ್ರಪ್ಪ ಘೀವಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: