RNI NO. KARKAN/2006/27779|Monday, February 2, 2026
You are here: Home » breaking news » ಗೋಕಾಕ:ಸದೃಢ ದೇಶ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಮುಖ್ಯ : ಸಚಿವ ಸತೀಶ್

ಗೋಕಾಕ:ಸದೃಢ ದೇಶ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಮುಖ್ಯ : ಸಚಿವ ಸತೀಶ್ 

ಸದೃಢ ದೇಶ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಮುಖ್ಯ : ಸಚಿವ ಸತೀಶ್
ಗೋಕಾಕ ಫೆ 1 : ಸದೃಢ ದೇಶ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಮುಖ್ಯವಾಗಿದ್ದು, ಯುವಕರು ದೈನಂದಿನ‌ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ರವಿವಾರದಂದು ನಗರದ ಶ್ರೀ ಮಹಾಲಕ್ಷ್ಮೀ ಸಭಾಂಗಣದಲ್ಲಿ ಕರ್ನಾಟಕ ಸ್ಟೇಟ್ ಅಮೆಚೂರ ಯೋಗ ಸ್ಟೋರ್ಟ್ಸ ಅಸೋಸಿಯೇಷನ್ ಬೆಂಗಳೂರು, ಜೆ.ಸಿ.ಐ ಸಂಸ್ಥೆ ಹಾಗೂ ಶ್ರೀ ವಿವೇಕಾನಂದ ಯೋಗ ಮತ್ತು ಸಂಸ್ಕೃತಿ ವಿಕಾಸ ಸಂಸ್ಥೆ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 4ನೇ ಕರ್ನಾಟಕ ರಾಜ್ಯ ಯೋಗಾಸನ ಸ್ಪೋರ್ಟ್ಸಲೀಗ -2026 ಸ್ವರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸದೃಢ ದೇಹದಲ್ಲಿ ಮಾತ್ರ ಸದೃಢ ಮನಸ್ಸು ಇರುತ್ತದೆ. ದೇಶದಲ್ಲಿ ಮಧುಮೇಹ ಮತ್ತು ಸ್ಥೂಲ ಕಾಯದ ಸಮಸ್ಯೆ ಹೆಚ್ಚಾಗುತ್ತಿದ್ದು, ಯೋಗವೇ ಉತ್ತಮ ಪರಿಹಾರವಾಗಿದೆ. ಆರೋಗ್ಯ ರಕ್ಷಿಸುವಲ್ಲಿ ಯೋಗ ಸಹಕಾರಿ’  ಎಂದರು. 

ರಾಜ್ಯ ಮತ್ತು ಬೇರೆ ಬೇರೆ ಜಿಲ್ಲೆಯ ಯೋಗಪಟ್ಟುಗಳು ಈ ಸ್ವರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಿ ಗೋಕಾಕ ನಗರದ ಕೀರ್ತಿ ಹೆಚ್ಚಿಸಿದ್ದಾರೆ. ಇನ್ನು ಈ ಯೋಗ ಸಂಸ್ಥೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಹಾರೈಸಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು.
ಯೋಗ ಬಹಳ ಕಷ್ಟದ ಕಾರ್ಯವಾಗಿದ್ದು, ಯೋಗ ಗುರು ಮುಖೇನ ಬರಬೇಕು ಆಗ ಏನಾದರೂ ಸಾಧಿಸ ಬಹುದು. ನಗರದಲ್ಲಿ ಇಂತಹ ಯೋಗ ಸ್ವರ್ಧೆಯನ್ನು ಏರ್ಪಡಿಸಿದ್ದು ಸಾರ್ಥಕವಾಗಿದೆ. ಯೋಗವು ಶರೀರವನ್ನು ಗಟ್ಟಿಗೊಳಿಸುವ ಮೂಲಕ ಶಕ್ತಿಯನ್ನು ತುಂಬುತ್ತದೆ. ಸುರ್ಯೋದಯಕ್ಕಿಂತ ಪೂರ್ವದಲ್ಲಿ ಯೋಗವನ್ನು ಮಾಡಬೇಕು ಇದರಿಂದ ಮನಸ್ಸನಲ್ಲಿ ಏಕಾಗ್ರತೆ ಮೂಡುತ್ತದೆ. ಇಡೀ ಜಗತ್ತಿಗೆ ಯೋಗವನ್ನು ಹೇಳಿಕೊಟ್ಟ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ .ಯೋಗವನ್ನು ಮಾಡಿ ಶರೀರ ಮತ್ತು ಆತ್ಮವನ್ನು ಗಟ್ಟಿಗೋಳಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಟಕುರ್ಕಿ ಚೌಕಿ ಮಠದ ಬಸವಲಿಂಗ ಮಹಾಸ್ವಾಮಿಗಳು, ಮಾತಾ ಶಿವಮಯಿ, ಡಾ.ಪಿ.ಎನ್. ಗಣೇಶಕುಮಾರ, ವಿಷ್ಣು ಲಾತೂರ, ಆನಂದ ಸೋರಗಾವಿ, ಜಿ.ಎನ್.ಕೃಷ್ಣಮೂರ್ತಿ, ಎ.ನಟರಾಜ್, ಚಂದ್ರಶೇಖರ್ ಕೊಣ್ಣೂರ, ಜಯಾನಂದ ಮಾದರ,ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ರಮೇಶ ಮಾದರ, ರಜನಿಕಾಂತ್ ಮಾಳೋದೆ, ಅಶೋಕ ಲಗಮಪ್ಪಗೋಳ, ಗುರು ಬಬಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: