ಗೋಕಾಕ:ಕ್ಷೇತ್ರದ ಜನತೆ ನನ್ನ ಹಾಗೂ ನನ್ನ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾವು ಚಿರ ಋಣಿ : ರಮೇಶ ಜಾರಕಿಹೊಳಿ

ಕ್ಷೇತ್ರದ ಜನತೆ ನನ್ನ ಹಾಗೂ ನನ್ನ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾವು ಚಿರ ಋಣಿ : ರಮೇಶ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 28 :
ಕ್ಷೇತ್ರದ ಜನತೆ ನನ್ನ ಹಾಗೂ ನನ್ನ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾವು ಚಿರ ಋಣಿಯಾಗಿದ್ದೆವೆ. ನಮ್ಮ ಕುಟುಂಬ ತಮ್ಮೆಲ್ಲರ ಸೇವೆಗೆ ಸದಾ ಸಿದ್ಧವಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ತಾಲೂಕಿನ ಅಂಕಲಗಿ ಪಟ್ಟಣ ಪಂಚಾಯತ ವ್ಯಾಪ್ತಿಯ ಅಕ್ಕತಂಗೇರಹಾಳ ಮತ್ತು ಅಂಕಲಗಿ ಪಟ್ಟಣದಲ್ಲಿ ನಗರೋತ್ಥಾನ ಹಂತ 4ರ ಯೋಜನೆಯಡಿ 5.ಕೋಟಿ ರೂ ವೆಚ್ಚದಲ್ಲಿ ಹಾಗೂ 15ನೇ ಹಣಕಾಸು ಯೋಜನೆಯಡಿ 2.5ಕೋಟಿ ಒಟ್ಟು ಅಂದಾಜು 8.ಕೋಟಿ ವೆಚ್ಚದ ರಸ್ತೆ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಗೋಕಾಕ ಮತಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿಗೆ ನಾನು ಬದ್ಧನಿದ್ದೆನೆ. ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ತಮ್ಮೆಲ್ಲರ ಸೇವೆ ಮಾಡುವ ಅವಕಾಶ ಕಲ್ಪಿಸಿದ್ದು ನನ್ನ ಸೌಭಾಗ್ಯವಾಗಿದೆ. ಮುಂದೆಯೂ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿ ರಾಜ್ಯದಲ್ಲೆ ಮಾದರಿಯಾಗಿಸಲು ಶ್ರಮಿಸುತ್ತೆನೆ ಎಂದರು.
ಇದೇ ಸಂದರ್ಭದಲ್ಲಿ ಅಂಕಲಗಿ ಪಟ್ಟಣದ ನೂರಾರು ಜನ ಅಭಿಮಾನಿಗಳು ಶಾಸಕ ರಮೇಶ ಜಾರಕಿಹೊಳಿ ಅವರನ್ನು ಸ್ವಾಗತಿಸಿ, ಸನ್ಮಾನಿಸಿದರು.
ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡ್ರ, ಮುಖ್ಯಾಧಿಕಾರಿ ಬಸವರಾಜ ಮನಗುಳಿ, ಕಿರಿಯ ಅಭಿಯಂತರ ಮಂಜುನಾಥ ಗಡಾದ, ಬಿಜೆಪಿ ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಮುನ್ನಾ ದೆಸಾಯಿ, ಬಿ ಬಿ ಉರಬಿನಹಟ್ಟಿ, ರಮೇಶ ನಿರ್ವಾಣಿ, ಸುನೀಲ ಮಾಸ್ತಿ, ಶಿವಾನಂದ ಇರಲಿ, ಚನ್ನಗೌಡ ಪಾಟೀಲ, ಮಲ್ಲಿಕಾರ್ಜುನ ನಾಯ್ಕ, ಶಿವಾನಂದ ಪಂಗನ್ನವರ, ಶಿವನಪ್ಪ ಕುಂದರಗಿ, ಸತ್ತೆಪ್ಪ ಅವ್ವನಗೋಳ, ಬಸವಂತ ಈಶ್ವರಪ್ಪಗೋಳ, ಬಸನಗೌಡ ನಿರ್ವಾಣಿ, ಬಸವರಾಜ ಪಟ್ಟಣಶೆಟ್ಟಿ, ಲಕ್ಕಪ್ಪ ಪೂಜೇರಿ, ಅನ್ನಾಸಾಬ ರಾಜಮಾನೆ, ಶಂಕರ ಬೂಸನ್ನವರ, ರಾಮಣ್ಣ ಸುಂಬಳಿ, ಅಖಿಲ ಕೊತ್ತವಾಲ, ಹಸೇನ ದೇಸಾಯಿ, ಅಡಿವೆಪ್ಪ ನಾವಲಗಟ್ಟಿ, ಮಂಜು ಪಟ್ಟಣಶೆಟ್ಟಿ, ಶಿವಾನಂದ ಪಟ್ಟಣಶೆಟ್ಟಿ, ಆನಂದ ಅತ್ತುಗೋಳ, ಮಲ್ಲಿಕಾರ್ಜುನ ಕುಲಿನವರ, ಅರುಣ ಮದವಾಲ ಸೇರಿದಂತೆ ನೂರಾರು ಜನ ಇದ್ದರು.