RNI NO. KARKAN/2006/27779|Thursday, April 2, 2026
You are here: Home » breaking news » ಗೋಕಾಕ:ಗೋಕಾಕ ಘಟಕದ ನಿರ್ವಾಹಕಿ ಅನ್ನಪೂರ್ಣಾ ಹೂಗಾರ ಅವರಿಗೆ ರಾಷ್ಟ್ರ ಮಟ್ಟದ ಅತ್ಯುತ್ತಮ ನಿರ್ವಾಹಕಿ ಪ್ರಶಸ್ತಿ

ಗೋಕಾಕ:ಗೋಕಾಕ ಘಟಕದ ನಿರ್ವಾಹಕಿ ಅನ್ನಪೂರ್ಣಾ ಹೂಗಾರ ಅವರಿಗೆ ರಾಷ್ಟ್ರ ಮಟ್ಟದ ಅತ್ಯುತ್ತಮ ನಿರ್ವಾಹಕಿ ಪ್ರಶಸ್ತಿ 

ಗೋಕಾಕ ಘಟಕದ ನಿರ್ವಾಹಕಿ ಅನ್ನಪೂರ್ಣಾ ಹೂಗಾರ ಅವರಿಗೆ ರಾಷ್ಟ್ರ ಮಟ್ಟದ ಅತ್ಯುತ್ತಮ ನಿರ್ವಾಹಕಿ ಪ್ರಶಸ್ತಿ

ಗೋಕಾಕ ಮಾ 8 : ಅಂತ್ರರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ಯವಾಗಿ ಎ. ಎಸ್‍.ಆರ್.ಟಿ.ಯು ಕೊಡಮಾಡುವ ರಾಷ್ಟ್ರಮಟ್ಟದ “ಅತ್ಯುತ್ತಮ ಮಹಿಳಾ ನಿರ್ವಾಹಕಿ” ಪ್ರಶಸ್ತಿಯನ್ನು ಶನಿವಾರದಂದು ದೆಹಲಿಯ ಜಾರ್ಖಂಡ್ ಹಾಲನಲ್ಲಿ ಡಾ.ಕಿರಣ ಬೇಡಿ ಅವರು ಗೋಕಾಕ ಘಟಕದ ನಿರ್ವಾಹಕಿ ಅನ್ನಪೂರ್ಣಾ ಹೂಗಾರ ಅವರಿಗೆ ನೀಡಿ ಗೌರವಿಸಿದರು.
ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಾಲ್ಕು ವಿಭಾಗಗಳಲ್ಲಿ ಒಟ್ಟು 8 ಜನ ಮಹಿಳಾ ಸಿಬ್ಬಂದಿಗಳು ಆಯ್ಕೆಯಾಗಿದ್ದರು. ಅದರಲ್ಲಿ ಗೋಕಾಕ ಘಟಕದ ನಿರ್ವಾಹಕಿ ಅನ್ನಪೂರ್ಣಾ ಹೂಗಾರ ಅವರು ರಾಷ್ಟ್ರಮಟ್ಟದ “ಅತ್ಯುತ್ತಮ ಮಹಿಳಾ ನಿರ್ವಾಹಕಿ” ಪ್ರಶಸ್ತಿಗೆ ಆಯ್ಕೆಯಾಗಿದ್ದರು.
ಈ ಸಂದರ್ಭದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಆಯ್‍ಎಎಸ್ ಅಧಿಕಾರಿ ಎಮ್. ಪ್ರೀಯಾಂಕ, ಎಪಿಆರ್‍ಟಿಸಿ ಅಧಿಕಾರಿ ದ್ವಾರಕಾ ತಿರುಮಲರಾವ, ದೆಹಲಿಯ ಗೀತಮ್ ತೀವಾರಿ ಸೇರಿದಂತೆ ಅನೇಕ ಗಣ್ಯರು ಇದ್ದರು.

Related posts: