ಗೋಕಾಕ:ಕನ್ನಡ ನಾಡು, ನುಡಿ,ಸಂಸ್ಕೃತಿಯನ್ನು ನಾವೆಲ್ಲರೂ ಗೌರವಿಸಬೇಕು : ಬಾಳೇಶ ಫಕಿರಪ್ಪನವರ

ಕನ್ನಡ ನಾಡು, ನುಡಿ,ಸಂಸ್ಕೃತಿಯನ್ನು ನಾವೆಲ್ಲರೂ ಗೌರವಿಸಬೇಕು : ಬಾಳೇಶ ಫಕಿರಪ್ಪನವರ
ಗೋಕಾಕ ಮೇ 6 : ಕನ್ನಡ ನಾಡು, ನುಡಿ,ಸಂಸ್ಕೃತಿಯನ್ನು ನಾವೆಲ್ಲರೂ ಗೌರವಿಸಬೇಕು ಎಂದು ಗೋಸಬಾಳಿನ ಸರಕಾರಿ ಶಾಲೆಯ ಶಿಕ್ಷಕ ಬಾಳೇಶ ಫಕಿರಪ್ಪನವರ ಹೇಳಿದರು.
ಮಂಗಳವಾರದಂದು ನಗರದ ಬಸವ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೋಕಾಕ ತಾಲೂಕು ಘಟಕದವರು ಹಮ್ಮಿಕೊಂಡ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
2 ಸಾವಿರ ವರ್ಷದ ಇತಿಹಾಸ ಇರುವ ಕನ್ನಡ ನಾಡಿನಲ್ಲಿ ಹುಟ್ಟಿದ ನಾವೇ ಪುಣ್ಯವಂತರು.ಕನ್ನಡ ನಾಡ ನುಡಿಯಾಗಿದೆ.ನಾವೆಲ್ಲರೂ ಕನ್ನಡ ಭಾಷೆಯನ್ನು ಬಳಸಬೇಕು. ವಚನಕಾರರು ಕನ್ನಡ ಸಾಹಿತ್ಯವನ್ನು ಬೆಳೆಸಿದರು. ಇಂದಿನ ಮಕ್ಕಳು ಹಾಗೂ ಯುವ ಪಿಳಿಗೆಯಲ್ಲಿ ಕನ್ನಡಾಭಿಮಾನವನ್ನು ಬೆಳೆಸಬೇಕಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಹಾಗೂ ಭಾಷೆಯನ್ನು ಶ್ರೀಮಂತ ಗೊಳಿಸೋಣ ಎಂದು ಹೇಳಿದರು.
ವೇದಿಕೆಯಲ್ಲಿ ಕಸಾಪ ತಾಲೂಕು ಅಧ್ಯಕ್ಷೆ ಶ್ರೀಮತಿ ಭಾರತಿ ಮದಭಾವಿ, ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ತಾವಂಶಿ, ಸಾಹಿತಿ ಚಂದ್ರಶೇಖರ್ ಅಕ್ಕಿ ಇದ್ದರು.
