ಗೋಕಾಕ:ಗೋಕಾಕ ನೂತನ ಜಿಲ್ಲೆಗಾಗಿ ಆಗ್ರಹಿಸಿ ನಾಳೆ ಉಸ್ತುವಾರಿ ಸಚಿವರಿಗೆ ಮನವಿ : ಕೈ ಮುಖಂಡ ಅಶೋಕ

ಗೋಕಾಕ ನೂತನ ಜಿಲ್ಲೆಗಾಗಿ ಆಗ್ರಹಿಸಿ ನಾಳೆ ಉಸ್ತುವಾರಿ ಸಚಿವರಿಗೆ ಮನವಿ : ಕೈ ಮುಖಂಡ ಅಶೋಕ
ಗೋಕಾಕ 18: ರಾಜ್ಯದಲ್ಲಿಯೇ ಎರಡನೇಯ ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಜಿಲ್ಲೆ ರಚನೆಮಾಡುವಂತೆ ಆಗ್ರಹಿಸಿ ಮತ್ತು ಈ ಕುರಿತು ಮಾನ್ಯ ಮುಖ್ಯಮಂತ್ರಿಗಳಲ್ಲಿ ನಿಯೋಗವನ್ನು ಒಯ್ಯುವ ಕುರಿತು ಮನವಿ ಮಾಡಲು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿಯವರಿಗೆ ಗೋಕಾಕ ಜಿಲ್ಲಾ ಚಾಲನಾ ಸಮೀತಿಯ ಅಧ್ಯಕ್ಷರಾದ ಪೂಜ್ಯ ಶ್ರೀ ಮುರುಘರಾಜೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ಗೋಕಾಕ ನ್ಯಾಯವಾದಿಗಳ ಸಂಘದ ಸಹಯೋಗದೊಂದಿಗೆ ನಾಳೆ ಶನಿವಾರ ದಿ: 19-07-2025 ರಂದು ಮುಂ: 10-30 ಗಂಟೆಗೆ ಗೋಕಾಕ ಹಿಲ್‍ಗಾರ್ಡನದಲ್ಲಿರುವ ಅವರ ಸ್ವಗೃಹದ ಕಚೇರಿಯಲ್ಲಿ ಮನವಿಯನ್ನು ಸಲ್ಲಿಸಲಾಗುವದು.
ಅದಕ್ಕೆ ಪೂರಕವಾಗಿ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಸಂಘ ಸಂಸ್ಥೆ ಮತ್ತು ಸಂಘಟನೆಗಳು, ಜಿಲ್ಲಾ ಹೋರಾಟಗಾರರು, ಚುನಾಯಿತ ಪ್ರತಿನಿಧಿಗಳು ಹಾಗೂ ಪಕ್ಷಾತೀತವಾಗಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡರುಗಳು ಮುಂ: 10-00 ಗಂಟೆಗೆ ಗೋಕಾಕ ನಗರದ ಕೋರ್ಟ್ ಹತ್ತಿರವಿರುವ ಶ್ರೀ ಬಸವೇಶ್ವರ ವೃತ್ತದಲ್ಲಿ ಸೇರಬೇಕೆಂದು ಹಾಗೂ ಸಚಿವರಿಗೆ ಮನವಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಗೋಕಾಕ ಜಿಲ್ಲಾ ಚಾಲನಾ ಸಮೀತಿ ಪರವಾಗಿ ಹಿರಿಯ ರಾಜಕೀಯ ಧುರೀಣ ಅಶೋಕ ಪೂಜಾರಿ ಮತ್ತು ಗೋಕಾಕ ನ್ಯಾಯವಾದಿ ಸಂಘದ ಅಧ್ಯಕ್ಷರಾದ ಸುಭಾಸಗೌಡ ಪಾಟೀಲ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
