RNI NO. KARKAN/2006/27779|Sunday, December 6, 2020
You are here: Home » breaking news » ಗೋಕಾಕ:ಮಕ್ಕಳಿಗೆ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ಉಜ್ವಲಗೋಳಿಸಿ : ಶಾಸಕ ಸತೀಶ ಜಾರಕಿಹೊಳಿ

ಗೋಕಾಕ:ಮಕ್ಕಳಿಗೆ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ಉಜ್ವಲಗೋಳಿಸಿ : ಶಾಸಕ ಸತೀಶ ಜಾರಕಿಹೊಳಿ 

ಮಕ್ಕಳಿಗೆ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ಉಜ್ವಲಗೋಳಿಸಿ : ಶಾಸಕ ಸತೀಶ ಜಾರಕಿಹೊಳಿ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 22 :

 

ಮಕ್ಕಳೆ ದೇವರು ಅವರೇ ನಿಮ್ಮ ಆಸ್ತಿಯಾಗಿದ್ದು, ಅವರಿಗೆ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ಉಜ್ವಲಗೋಳಿಸುವಂತೆ ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಹೇಳಿದರು

ರವಿವಾರದಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಾದಿಗ ಸಮಾಜ ಸೇವಾ ಸಮಿತಿಯವರು ಆಯೋಜಿಸಿದ್ದ ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಮಾದಿಗ ಸಮಾಜದ ಪ್ರಥಮ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಶೈಕ್ಷಣಿಕವಾಗಿ ಹಿಂದುಳಿದ ಮಾದಿಗ ಸಮಾಜ ಭಾಂಧವರು ಮೂಡನಂಬಿಕೆ ಹಾಗೂ ಅನಿಷ್ಠ ಪದ್ದತಿಗಳಿಂದ ಹೊರ ಬಂದು ಅನಾವಶಕ ಖರ್ಚು ಮಾಡದೆ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಖರ್ಚು ಮಾಡಿ ಬದುಕನ್ನು ರೂಪಿಸಿ. ಬಸವಾದಿ ಶರಣರು ಶೋಷಣೆಯ ವಿರುದ್ಧವೇ ಹೋರಾಟ ಮಾಡಿದ್ದಾರೆ. ಡಾ.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ್ದರಿಂದಲೆ ಶಿಕ್ಷಣ ಹಾಗೂ ಸರಕಾರಿ ಸೌಲಭ್ಯಗಳು ದೊರೆಯುತ್ತಿವೆ. ಮೂಢನಂಬಿಕೆ ಮನುವಾದದ ವಿರುದ್ಧ ಅವರು ಮಾಡಿದ ಹೋರಾಟವನ್ನು ಮುಂದುವರಿಸಬೇಕು ಸಂವಿಧಾನ ಬದಲಿಸುವವರ ವಿರುದ್ದ ಹೋರಾಟ ನಡೆಸಬೇಕು. ಸಮಯಕ್ಕೆ ಮಹತ್ವ ನೀಡಿ ಮಕ್ಕಳ, ಕುಟುಂಬ ಹಾಗೂ ಸಮಾಜದ ಉತ್ತಮ ಭವಿಷ್ಯಕ್ಕೆ ಶ್ರಮಿಸಲು ಕರೆ ನೀಡಿದ ಅವರು ಇದಕ್ಕೆ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.

ಹುಬ್ಬಳ್ಳಿ , ಧಾರವಾಡ ಬಿ ಆರ್.ಟಿ.ಎಸ್ ಕಂಪನಿಯ ಹಣಕಾಸು ಅಧಿಕಾರಿ ತಮ್ಮಣ ಮಾದರ ಮಾತನಾಡಿ ಶೋಷಿತ , ನಿರ್ಲಕ್ಷ್ಯ , ತಿರಸ್ಕಾರಕ್ಕೆ ಒಳಪಟ್ಟ ಸಮುದಾಯದ ಕುಡಿಗಳು ಶಿಕ್ಷಣದಲ್ಲಿ ಸಾಧನೆ ಮಾಡಿರುವುದು ಶ್ಲಾಘನೀಯ ಅವರನ್ನು ಪ್ರೋತ್ಸಾಹಿಸುವುದು ನಮ್ಮಲ್ಲರ ಕರ್ತವ್ಯವಾಗಿದೆ. ಸಂಘರ್ಷದಿಂದ ಕೂಡಿದ ದೇಶದಲ್ಲಿ ಬದುಕಲು ಶಿಕ್ಷಣ ಅತಿ ಅವಶವಾಗಿದೆ. ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುವುದೆ ಶಿಕ್ಷಣ ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಲು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕೆಂದು ಹೇಳಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾದಿಗ ಸಮಾಜ ಸೇವಾ ಸಮಿತಿ ಅಧ್ಯಕ್ಷ ಬಸವರಾಜ ಕಾಡಾಪೂರ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿ ಹಾಗೂ ಸಾಧಕರನ್ನು ಸತ್ಕರಿಸಿ , ಗೌರವಿಸಲಾಯಿತು

ವೇದಿಕೆಯ ಮೇಲೆ ಜಿ.ಪಂ ಅಧ್ಯಕ್ಷೆ ಆಶಾ ಐಹೊಳೆ, ಜಿ.ಪಂ ಸದಸ್ಯೆ ಮಿನಾಕ್ಷಿ ಜೋಡಟ್ಟಿ, ಡಿವೈಎಸ್ಪಿ ಬಾಲಚಂದ್ರ ಶಿಂಗ್ಯಾಗೋಳ , ಪಿಎಸ್ಐ ಪುಷ್ಪಾ ಮುಗಳಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಕೆಂಪವ್ವ ಹರಿಜನ, ಮುಖಂಡರುಗಳಾದ ಅಶೋಕ ಲಗಮಪ್ಪಗೋಳ, ರಮೇಶ ಮಾದರ , ಸತ್ಯಪ್ಪ ಕರವಾಡೆ , ಕಾಡಪ್ಪ ಮೇಸ್ತ್ರಿ, ಸೇರಿದಂತೆ ಅನೇಕರು ಇದ್ದರು.

Related posts: