ಗೋಕಾಕ:ಆಶಾ,ಅಂಗನವಾಡಿ ಕಾರ್ಯಕರ್ತರಿಗೆ ಉಪಹಾರ ಹಣ್ಣು ಹಂಪಲು ಮಜ್ಜಿಗೆ ವಿತರಣೆ
ಆಶಾ,ಅಂಗನವಾಡಿ ಕಾರ್ಯಕರ್ತರಿಗೆ ಉಪಹಾರ ಹಣ್ಣು ಹಂಪಲು ಮಜ್ಜಿಗೆ ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಎ 29 :
ಕರೋನಾ ಮಹಾಮಾರಿಯನ್ನು ತಡೆಗಟ್ಟಲು ಪೊಲೀಸ, ಆರೋಗ್ಯ ಸಿಬ್ಬಂದಿ, ಪೌರಕಾರ್ಮಿಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ ಎಂದು ಗುತ್ತಿಗೇದಾರ ದಸ್ತಗೀರಸಾಬ ರಾಜೇಖಾನ ಹೇಳಿದರು.
ಅವರು, ಬುಧವಾರದಂದು ಸಚಿವ ರಮೇಶ ಜಾರಕಿಹೊಳಿ ಹಾಗೂ ಅಂಬಿರಾವ ಪಾಟೀಲ ಅಭಿಮಾನಿಗಳ ಬಳಗದ ವತಿಯಿಂದ ಪೊಲೀಸ, ಆರೋಗ್ಯ ಸಿಬ್ಬಂದಿ, ಪೌರಕಾರ್ಮಿಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಉಪಹಾರ ಹಣ್ಣು ಹಂಪಲು ಮಜ್ಜಿಗೆಯನ್ನು ವಿತರಿಸಿ ಮಾತನಾಡಿದರು.
ಕರೋನಾ ಸೋಂಕನ್ನು ತಡೆಗಟ್ಟಲು ಲಾಕ್ ಡೌನ್ ಅನಿವಾರ್ಯವಾಗಿದ್ದು, ಜನರು ಸರಕಾರದ ಆದೇಶವನ್ನು ಪಾಲನೆ ಮಾಡುವ ಮೂಲಕ ಸೋಂಕು ಹೊಡೆದೊಡಿಸಲು ಪ್ರಯತ್ನಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಪಂ ಸದಸ್ಯ ಹಾಗೂ ಸಮಾಜ ಸೇವಕ ಹನಮಂತ ದುರ್ಗನ್ನವರ, ಗುತ್ತಿಗೇದಾರರಾದ ನಿಂಗಪ್ಪ ತೋಳಿನವರ, ಶಿವಾನಂದ ಪೂಜೇರಿ, ರಂಗಪ್ಪ ನಂದಿ, ಸಮರ್ಥ ಚುನಮರಿ, ಜಗದೀಶ ವಣ್ಣೂರ, ಬಾಬಾಜಾನ ದೇಸಾಯಿ, ದಶರಥ ಕೊಪ್ಪದ, ಸೇರಿದಂತೆ ಸಚಿವ ರಮೇಶ ಜಾರಕಿಹೊಳಿ ಹಾಗೂ ಅಂಬಿರಾವ ಪಾಟೀಲ ಅಭಿಮಾನಿಗಳ ಬಳಗದವರು ಇದ್ದರು.