ಗೋಕಾಕ:ನ್ಯಾಯಾಂಗ ವ್ಯವಸ್ಥೆ ಸಮಾನತೆಯ ಒಂದು ಅಂಗವಾಗಿದೆ : ನ್ಯಾಯಾಧೀಶ ಶ್ರೀಶಾನಂದ ಅಭಿಮತ

ನ್ಯಾಯಾಂಗ ವ್ಯವಸ್ಥೆ ಸಮಾನತೆಯ ಒಂದು ಅಂಗವಾಗಿದೆ : ನ್ಯಾಯಾಧೀಶ ಶ್ರೀಶಾನಂದ ಅಭಿಮತ
ಗೋಕಾಕ ಫೆ 1 : ನ್ಯಾಯಾಂಗ ವ್ಯವಸ್ಥೆ ಸಮಾನತೆಯ ಒಂದು ಅಂಗವಾಗಿದೆ ಎಂದು ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಶ್ರೀಶಾನಂದ ಹೇಳಿದರು
ರವಿವಾರದಂದು 21ನೇ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲು ನಗರಕ್ಕೆ ಆಗಮಿಸಿದ ಸಮಯದಲ್ಲಿ ನಗರದ ಶೂನ್ಯ ಸಂಪಾದನ ಮಠದಲ್ಲಿ ಚೆನ್ನಬಸವೇಶ್ವರ ವಿದ್ಯಾಪೀಠದ ಬಿಸಿಇ ವಿದ್ಯಾರ್ಥಿಗಳ ಜೊತೆಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿ ಅವರು ಮಾತನಾಡಿದರು
ಅಸಮಾನತೆ ಮತ್ತು ಶ್ರೇಣಿಕೃತ ವ್ಯವಸ್ಥೆ ಬೇರೆ ಬೇರೆಯಾಗಿವೆ ಆದರೆ ಆರ್ಟ್ರೀಕಲ್ 14 ಸಮಾನತೆಯ ಸಾರವನ್ನು ಸಾರುತ್ತದೆ. ಇದಕ್ಕೆ ಆಧ್ಯಾತ್ಮದಲ್ಲಿ ಬಸವಣ್ಣನವರ ಸಾರಿ ಹೇಳಿದ್ದಾರೆ. ವೈಯಕ್ತಿಕ ಭಾವನೆಗಳಿಗೆ ನ್ಯಾಯಾಂಗದಲ್ಲಿ ಜಾಗವಿಲ್ಲ. ಕಾನೂನಿನ ಚೌಕಟಿನಲ್ಲಿ ನ್ಯಾಯಾಂಗದ ವ್ಯವಸ್ಥೆ ಇದೆ. ತಮ್ಮ ತಮ್ಮ ಮನೆಯಲ್ಲಿ ಬೇಕಾಗಿರುವ ಧರ್ಮ ಗ್ರಂಥಗಳನ್ನು ಓದಿಕೊಳ್ಳುತ್ತಾರೆ. ಸಂವಿಧಾನದ ಚೌಕಟ್ಟಿನಲ್ಲಿ ಎಲ್ಲರೂ ಒಂದೆ ಅದನ್ನು ನ್ಯಾಯಾಂಗ ಪಾಲಿಸುತ್ತಿದೆ. ನ್ಯಾಯಾಧೀಶರು ತ್ವರಿತವಾಗಿ ನ್ಯಾಯಗಳನ್ನು ಬಗೆಹರಿಸುವಲ್ಲಿ ನ್ಯಾಯವಾದಿಗಳ ಸಹಕಾರ ಬಹಳ ಮುಖ್ಯವಾಗಿದೆ. ಸಮಾಜದ ಒಳಿತಕ್ಕಾಗಿ ನ್ಯಾಯಾಧೀಶ ಗಡಿಯಾರ ನೋಡದೆ ಕಾರ್ಯ ಮಾಡಿದರೆ ಅವರ ನ್ಯಾಯಗಳಿಗೆ ತ್ವರಿತಗತಿಯಲ್ಲಿ ನ್ಯಾಯ ಒದಗಿಸಲು ಸಾಧ್ಯ ಆ ದಿಸೆಯಲ್ಲಿ ನ್ಯಾಯಾಧೀಶರಾದವರು ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಉಮೇಶ ಅತನೂರೆ, ಶ್ರೀಮತಿ ಚೈತ್ರಾ ಕುಲಕರ್ಣಿ, ನ್ಯಾಯವಾದಿ ಸಂಘಧ ಅಧ್ಯಕ್ಷ ಸುಭಾಷ ಪಾಟೀಲ ಆಡಳಿತಾಧಿಕಾರಿ ಅಡಿವೇಶ ಗವಿಮಠ, ಅರ್ಪನಾ ಕುಲಕರ್ಣಿ ಉಪಸ್ಥಿತರಿದ್ದರು
