ಮೂಡಲಗಿ:ಭಾರತ ಪ್ರಪಂಚದಲ್ಲಿ ವಿವಿಧತೆಯಲ್ಲಿ ಏಕತೆ ಮೆರೆಯುತ್ತಿರುವ ಹೆಮ್ಮೆಯ ದೇಶವಾಗಿದೆ: ಶಾಸಕ ಬಾಲಚಂದ್ರ
ಭಾರತ ಪ್ರಪಂಚದಲ್ಲಿ ವಿವಿಧತೆಯಲ್ಲಿ ಏಕತೆ ಮೆರೆಯುತ್ತಿರುವ ಹೆಮ್ಮೆಯ ದೇಶವಾಗಿದೆ: ಶಾಸಕ ಬಾಲಚಂದ್ರ
ಮೂಡಲಗಿ ಡಿ 3: ಭಾರತ ಪ್ರಪಂಚದಲ್ಲಿ ವಿವಿಧತೆಯಲ್ಲಿ ಏಕತೆ ಮೆರೆಯುತ್ತಿರುವ ಹೆಮ್ಮೆಯ ದೇಶವಾಗಿದೆ. ಎಲ್ಲ ಜಾತಿಯವರು ಒಗ್ಗಟ್ಟಿನಿಂದ ಪರಸ್ಪರ ಸಹಬಾಳ್ವೆಯಿಂದ ಬದುಕುತ್ತಿರುವುದು ಏಕತೆಯ ಸಂಕೇತವಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಸಮೀಪದ ಪಟಗುಂದಿ ಗ್ರಾಮದ ಲಕ್ಷ್ಮೀದೇವಿ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಪಟಗುಂದಿ ಗ್ರಾಮದ ಅಭಿವೃದ್ಧಿಗೆ ಸರ್ಕಾರದಿಂದ ಸಾಕಷ್ಟು ಅಭಿವೃದ್ಧಿಪರ ಕೆಲಸಗಳನ್ನು ಜಾರಿಗೊಳಿಸಿದ್ದು, ಪಟಗುಂದಿ ಕ್ರಾಸದಿಂದ ಕಮಲದಿನ್ನಿವರೆಗಿನ ರಸ್ತೆ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ ಬಂದಿದೆ. ಗ್ರಾಮ ಪಂಚಾಯತಿ ಕಟ್ಟಡ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ 23 ಲಕ್ಷ ರೂ, 8 ಲಕ್ಷ ರೂ. ವೆಚ್ಚದಲ್ಲಿ ನಾಯ್ಕರ ತೋಟದಿಂದ ಅಪ್ಪಣ್ಣಾ ಪೂಜೇರಿ ತೋಟದವರೆಗೆ ರಸ್ತೆ ನಿರ್ಮಾಣ, 30 ಲಕ್ಷ ರೂ. ವೆಚ್ಚದಲ್ಲಿ ಬಾಲಚಂದ್ರ ನಗರದಲ್ಲಿ ಕಾಂಕ್ರೀಟ ರಸ್ತೆ, ಗಾಂಧಿ ನಗರದಲ್ಲಿ ನಿರಂತರ ಜ್ಯೋತಿ ಸೇರಿದಂತೆ ಪ್ರಗತಿ ಕಾರ್ಯಗಳಿಗೆ ಅನುದಾನ ನೀಡಲಾಗಿದೆ ಎಂದು ಹೇಳಿದರು.
ಹಿಡಕಲ್ ಜಲಾಶಯದಿಂದ ಈಗಾಗಲೇ ಹರಿಸುತ್ತಿರುವ ನೀರು ಇದೇ ದಿ. 10 ರಂದು ಕೊನೆಗೊಳ್ಳಲಿದೆ. ರೈತರು ಈ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೋರಿದರು.
ಧರ್ಮಟ್ಟಿ ಗ್ರಾಪಂ ಮಾಜಿ ಅಧ್ಯಕ್ಷರಾದ ರಾಮಣ್ಣಾ ಕಸ್ತೂರಿ, ಎಚ್.ವ್ಹಿ.ನಾಯಿಕ, ಬಸವರಾಜ ಕಸ್ತೂರಿ, ಮುಖಂಡರಾದ ಚನಗೌಡ ಪಾಟೀಲ, ಮಹಾದೇವ ಬಿಜಗುಪ್ಪಿ, ಪರಸಪ್ಪ ಉಪ್ಪಾರ, ಪ್ರಕಾಶ ಬಾಗೇವಾಡಿ, ರಾಮಗೌಡ ಪಾಟೀಲ, ಬಸಗೌಡ ಪಾಟೀಲ, ಶಿವನಗೌಡ ಪಾಟೀಲ, ಬಸು ಖನಗಾಂವ, ಇಸಾಕ ಫಿರಜಾದೆ, ರಮಜಾನ ಮುಲ್ತಾನಿ, ಅಶೋಕ ಸರ್ವಿ, ಮುಂತಾದವರು ಉಪಸ್ಥಿತರಿದ್ದರು.