RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಮಾನವನ ಪ್ರಯತ್ನ ಜತೆಗೆ ಭಗವಂತನ ಅನುಗ್ರಹ ಇದ್ದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ : ಲಖನ್ ಜಾರಕಿಹೊಳಿ

ಗೋಕಾಕ:ಮಾನವನ ಪ್ರಯತ್ನ ಜತೆಗೆ ಭಗವಂತನ ಅನುಗ್ರಹ ಇದ್ದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ : ಲಖನ್ ಜಾರಕಿಹೊಳಿ 

ಮಾನವನ ಪ್ರಯತ್ನ ಜತೆಗೆ ಭಗವಂತನ ಅನುಗ್ರಹ ಇದ್ದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ : ಲಖನ್ ಜಾರಕಿಹೊಳಿ

ಗೋಕಾಕ ನ 23: ಮಾನವನ ಪ್ರಯತ್ನ ಜತೆಗೆ ಭಗವಂತನ ಅನುಗ್ರಹ ಇದ್ದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿದರು.

ಶುಕ್ರವಾರದಂದು ನಗರದ ಶ್ರೀ ಲಕ್ಷ್ಮೀದೇವಿ ಪಾದಗಟ್ಟಿಯ 23ನೇ ವರ್ಷದ ಕಾರ್ತಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ಯಶಸ್ಸು ಸಿಗಬೇಕಾದರೆ ಮಾನವ ಶಕ್ತಿಗೆ ದೈವ ಬಲ, ದೇವರ ಅನುಗ್ರಹ ಆಗಲೇಬೇಕು. ಅಂದಾಗ ಮಾತ್ರ ಆ ವ್ಯಕ್ತಿ ಜೀವನದಲ್ಲಿ ಮಹತ್ತರ ಸಾಧನೆ ಮಾಡುತ್ತಾನೆ. ಈ ಮೂರು ಬಲಗಳು ಒಂದಕ್ಕೊಂದು ಅಂಟಿಕೊಂಡಿದ್ದು, ದೈವ ಬಲ ಇಲ್ಲದೇ ಪ್ರಯತ್ನ ಆಗುವುದಿಲ್ಲ. ಈ ಮೂರನ್ನು ಒಟ್ಟಾಗಿಸಿಕೊಂಡು ಜೀವನ ಮುನ್ನಡೆಸಿದಾಗ ಮಹತ್ತರ ಸಾಧನೆಗೆ ವ್ಯಕ್ತಿ ಸಾಕ್ಷಿಯಾಗಲಿದ್ದಾನೆ ಎಂದರು.
ಇದೇ ಸಂದರ್ಭದಲ್ಲಿ ರಾಜಸ್ತಾನದಲ್ಲಿ ನಡೆದ ರಾಷ್ಟ್ರ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಕುಮಾರಿ ಸುಹಾನ್ ಮಿರ್ಜಿ ಇತಳನ್ನು ವಿಧಾನಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಸತ್ಕರಿಸಿ, ಗೌರವಿಸಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರುಗಳಾದ ಟಿ.ಆರ್.ಕಾಗಲ್, ಮಡೆಪ್ಪ ತೋಳಿನವರ, ಡಾ.ಸಿದ್ದಣ್ಣ ಕಮತ್,ವಿರುಪಾಕ್ಷಿ ಮಿರ್ಜಿ ಉಪಸ್ಥಿತರಿದ್ದರು.

Related posts: