RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಸೈಕಲ್ ಗಳ ಗುಣಮಟ್ಟ ಪರಿಶೀಲಿಸಲು ಸೈಕಲ್ ಏರಿದ ಡಿಡಿಪಿಐ ಮೋಹನ ಹಂಚಾಟಿ

ಗೋಕಾಕ:ಸೈಕಲ್ ಗಳ ಗುಣಮಟ್ಟ ಪರಿಶೀಲಿಸಲು ಸೈಕಲ್ ಏರಿದ ಡಿಡಿಪಿಐ ಮೋಹನ ಹಂಚಾಟಿ 

ಸೈಕಲ್ ಗಳ ಗುಣಮಟ್ಟ ಪರಿಶೀಲಿಸಲು ಸೈಕಲ್ ಏರಿದ ಡಿಡಿಪಿಐ ಮೋಹನ ಹಂಚಾಟಿ

 

 

ನಮ್ಮ ಬೆಳಗಾವಿ ಸುದ್ದಿ ,     ಗೋಕಾಕ ಅ 29 :

 

 

ಸರಕಾರದಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತಿರುವ ಸೈಕಲ್ ಗಳ ಗುಣಮಟ್ಟವನ್ನು ಪರಿಶೀಲಿಸಲು ಬಂದಿದ್ದ ಚಿಕ್ಕೋಡಿ ಡಿಡಿಪಿಐ ಮೋಹನ ಹಂಚಾಟಿ ಸೈಕಲ್ ಏರಿದ ಘಟನೆ ನಡೆದಿದೆ
ಬುಧವಾರದಂದು ತಾಲೂಕಿನ ಗೋಕಾಕ ಫಾಲ್ಸದ ಸೈಕಲ್ ಜೊಡನಾ ಕೇಂದ್ರ ದಿ.ವೋಲಕ್ಯಾಟ ಅಕ್ಯಾಡಮಿ ಶಾಲೆಗೆ ಭೇಟಿ ನೀಡಿದ ಉಪನಿರ್ದೇಶಕರು ವಿದ್ಯಾರ್ಥಿಗಳಿಗೆ ನೀಡುವ ಸೈಕಲಗಳನ್ನು ಪರಿಶೀಲಿಸಲು ಶಾಲಾ ಮೈದಾನದಲ್ಲಿ ಸೈಕಲ್ ಏರಿ ರೌಂಡ್ಸ ಹಾಕಿ ಸರಕಾರ ನಿಗದಿ ಪಡಿಸಿರುವ ಗುಣಮಟ್ಟವನ್ನು ಪರಿಶೀಲಿಸಿದರು

ಈ ಸಂದರ್ಭದಲ್ಲಿ ಡಿ.ವಾಯ್.ಪಿ.ಸಿ ಅಧಿಕಾರಿ ಶ್ರೀಮತಿ ರೇವತಿ ಮಠದ, ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಕ್ಷೇತ್ರ ಸಮನ್ವಯ ಅಧಿಕಾರಿ ಶ ಎಂ.ಬಿ ಪಾಟಿಲ್, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಸಯ್ಯದ , ಶಿಕ್ಷಣ ಸಂಯೋಜಕ ಎನ್.ಆರ್.ಪಾಟೀಲ ಉಪಸ್ಥಿತರಿದ್ದರು

Related posts: