ಗೋಕಾಕ:ಕವಿತೆಗಳಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುವ ಜೊತೆಗೆ ಸ್ಪಷ್ಟತೆ ಇರಬೇಕು : ಡಾ.ಸಿ.ಕೆ ನಾವಲಗಿ
ಕವಿತೆಗಳಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುವ ಜೊತೆಗೆ ಸ್ಪಷ್ಟತೆ ಇರಬೇಕು : ಡಾ.ಸಿ.ಕೆ ನಾವಲಗಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 26 :
ಕವಿತೆಗಳಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುವ ಜೊತೆಗೆ ಸ್ಪಷ್ಟತೆ ಇರಬೇಕು . ಅಂತಹ ಕವಿತೆಗಳು ರಚನೆಯಾದಾಗ ಮಾತ್ರ ಓದುಗರ ಮನಸ್ಸು ಮುಟ್ಟಲು ಸಾಧ್ಯ ಎಂದು ಜಾನಪದ ವಿದ್ವಾಂಸ ಡಾ.ಸಿ.ಕೆ.ನಾವಲಗಿ ಹೇಳಿದರು.
ಶನಿವಾರದಂದು ನಗರದ ಜೆ.ಎಸ್.ಎಸ್.ಪದವಿಪೂರ್ವ ಕಾಲೇಜುನಲ್ಲಿ ಜೆ.ಎಸ್.ಎಸ್. ಪದವಿಪೂರ್ವ ಕಾಲೇಜು ಹಾಗೂ ಸಿದ್ದೇಶ್ವರ ಸಾಹಿತ್ಯ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಪ್ರೋ.ಶಿವಲೀಲಾ ಪಾಟೀಲ ಇವರ ಎರೆಡು ಕವನ ಸಂಕಲನ ಲೋಕಾರ್ಪಣೆ ಸಮಾರಂಭದಲ್ಲಿ ಚೇತನ ಕೃತಿ ಕುರಿತು ಅವರು ಮಾತನಾಡಿದರು.
ಅಂತರಂಗದಲ್ಲಿ ಇರುವಂತಹ ಕಾವ್ಯ ಶಕ್ತಿಯನ್ನು ಕವಿತೆಯ ಮೂಲಕ ಹೊರಹಾಕಿ ಎಲ್ಲರಲ್ಲಿಯೂ ಓದುವ ಆಸಕ್ತಿ ಹೆಚ್ಚಿಸುವ ಕಾರ್ಯ ಇಂದಿನ ಕೃತಿ ಹಾಗೂ ಕವನ ಸಂಕಲನಗಳು ಮಾಡಬೇಕಾಗಿದೆ. ಸುಮ್ಮನೆ ಬರೆದ ಸಾಲುಗಳು ಕವನ ಅಥವಾ ಕವಿತೆಯಾಗುವುದಿಲ್ಲ.
ಬರೆಹಗಾರನಲ್ಲಿ ಒಂದು ವಿಷಯವಸ್ತು ನಿರ್ಧಿಷ್ಟವಾದ ಸ್ಥಾನದಲ್ಲಿದ್ದು ಅದಕ್ಕೆ ಪದಗಳನ್ನು ಬೆಸೆದಾಗ ಅದು ಕವನದ ರೂಪ ಪಡೆದು ಜನರಿಗೆ ಓದಲು ಮುದನೀಡುತ್ತದೆ. ಮತ್ತು ಮನಸಿನಲ್ಲಿ ಕೆಲಕಾಲ ಅದರ ಪ್ರಭಾವ ಸಂಚಾರವಾಗುತ್ತದೆ. ಅದನ್ನು ಮನದಲ್ಲಿಟ್ಟುಕೊಂಡು ಕವನ ಹಾಗೂ ಕವಿತೆ ರಚಿಸುವವರು ಕವಿತೆ ಅಥವಾ ಕವನಗಳನ್ನು ರಚಸಿಬೇಕು.
ಕವಿತೆ ಮತ್ತು ಕವನಕ್ಕೆ ಇರುವ ವ್ಯತ್ಯಾಸಗಳನ್ನು ಅರಿತು ಕವನ ಅಥವಾ ಕವಿತೆ ರಚನೆಗೊಂಡರೆ ಮಾತ್ರ ಆ ಕವನಗಳು ಓದುಗರಲ್ಲಿ ಮನೆ ಮಾಡಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರೋ.ಶಿವಾಲೀಲಾ ಪಾಟೀಲ ಅವರು ರಚಿಸಿರುವ ಚೇತನ ಹಾಗೂ ಉಷೆ ಕವನ ಸಂಕಲಗಳು ಸಮಕಾಲಿನ ಸಮಸ್ಯೆಗಳನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಈ ಕವನ ಸಂಕಲನಗಳು ಓದುಗರಿಗೆ ಮುದ ನೀಡುವಲ್ಲಿ ಯಾವುದೇ ಸಂದೇಹ ವಿಲ್ಲ ಇಂತಹ ಹತ್ತಾರು ಅರ್ಥಪೂರ್ಣ ಕವನ ಸಂಕಲನಗಳು ಅವರ ಲೇಖನಿಯಿಂದ ಹೊರಬರಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೋ.ಚಂದ್ರಶೇಖರ್ ಅಕ್ಕಿ ವಹಿಸಿದ್ದರು.
ಶಿವಲೀಲಾ ರಚಿಸಿದ ಚೇತನ ಹಾಗೂ ಉಷೆ ಕೃತಿಗಳನ್ನು ಹಿರಿಯ ಮುಖಂಡರಾದ ವ್ಹಿ.ಎಸ್. ಶಿಂಧೋಳಿಮಠ ಲೋಕಾರ್ಪಣೆಗೊಳಿಸಿದರು. ಉಷೆ ಕೃತಿ ಕುರಿತು ಡಾ.ಎ.ವೈ .ಪಂಗಣ್ಣವರ ಮಾತನಾಡಿದರು.
ವೇದಿಕೆಯಲ್ಲಿ ಆರ್.ಎಂ.ವಾಲಿ, ಶ್ರೀಮತಿ ಪುಷ್ಪಾ ಮುರಗೋಡ, ಶ್ರೀಮತಿ ಆರ್.ಬಿ.ಬಿರಾದಾರ ಉಪಸ್ಥಿತರಿದ್ದರು.