RNI NO. KARKAN/2006/27779|Sunday, February 1, 2026
You are here: Home » breaking news » ಖಾನಾಪುರ:ಖಾನಾಪೂರ ಬಳಿ ಭೀಕರ ಅಪಘಾತ ಮೂವರ ದುರ್ಮರಣ

ಖಾನಾಪುರ:ಖಾನಾಪೂರ ಬಳಿ ಭೀಕರ ಅಪಘಾತ ಮೂವರ ದುರ್ಮರಣ 

ಖಾನಾಪೂರ ಬಳಿ ಭೀಕರ ಅಪಘಾತ ಮೂವರ ದುರ್ಮರಣ

ನಮ್ಮ ಬೆಳಗಾವಿ ಸುದ್ದಿ ಖಾನಾಪುರ ಮಾ 29:

ಖಾನಾಪೂರ ಬಳಿ ಭೀಕರ ರಸ್ತೆ ಅಪಘಾತ ಸಂಬವಿಸಿದ್ದು ಮೂರು ಜನ ಸ್ಥಳದಲ್ಲೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಗುರುವಾರ ಸಾಯಂಕಾಲ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹೆಬ್ಬಾಳ ಗ್ರಾಮದ‌ ಬಳಿ ನಡೆದಿದೆ

ಕಾರ್ ಮತ್ತು ಟಿಪ್ಪರ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ ಮೂರು ಜನ ಸಾವನ್ನಪ್ಪಿದ್ದಾರೆ.ಬೆಂಗಳೂರಿನ ನಾಗೇನಹಳ್ಳಿ ನಿವಾಸಿ ಬಿ.ಎಸ್. ಬಾಬಯ್ಯ (66), ಅವರ ಸೊಸೆ ಅಜೀರಾಬಿ (33) ಮತ್ತು ಮೊಮ್ಮಗ ಅಬ್ಬಾಸ್ (4) ಮೃತ ದುರ್ದೈವಿಗಳು.

ಮೃತರು ಬೆಂಗಳೂರಿನ ನಾಗೇನಹಳ್ಳಿ ನಿವಾಸಿಗಳು ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ‌ಮೂರು ಜನರಿಗೆ‌ ಗಂಭೀರ ಗಾಯಗಳಾಗಿವೆ.ಗಾಯಾಳುಗಳನ್ನ‌ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related posts: