ಗೋಕಾಕ:’ನಟಸಾರ್ವಭೌಮ’ ಅಬ್ಬರ ಬಲು ಜೋರು : ನಟ ಪುನೀತನ ಬೃಹದಾಕಾರದ ಕಟೌಟಗಳಿಗೆ ಹಾರ,ಮಾಲೆ ಹಾಕಿ ಸಂಭ್ರಮಿಸಿದ ಅಭಿಮಾನಿಗಳು
‘ನಟಸಾರ್ವಭೌಮ’ ಅಬ್ಬರ ಬಲು ಜೋರು : ನಟ ಪುನೀತನ ಬೃಹದಾಕಾರದ ಕಟೌಟಗಳಿಗೆ ಹಾರ,ಮಾಲೆ ಹಾಕಿ ಸಂಭ್ರಮಿಸಿದ ಅಭಿಮಾನಿಗಳು
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 7 :
ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಗೊಂಡಿದೆ . ನಗರದ ಲಕ್ಮೀ ಚಿತ್ರ ಮಂದಿರದಲ್ಲಿ ಮೊದಲ ಪ್ರದರ್ಶನ ಕಂಡ ಈ ಚಿತ್ರಕ್ಕೆ ಇಂದು ಪುನಿತ ಅಭಿಮಾನಿಗಳು ಅವರ ಬೃಹದಾಕಾರದ ಕಟೌಟ ಅಳವಡಿಸಿ ಹಾರ ಮಾಲೆ ಹಾಕಿ ಅಭಿಮಾನಪಟ್ಟರು.
ಮೊದಲ ದಿನವೇ ಗೋಕಾಕ ನಗರ ಸೇರಿದಂತೆ ಅನೇಕ ಗ್ರಾಮಗಳಿಂದ ತನ್ನ ನೆಚ್ಚಿನ ನಟನ ಚಿತ್ರವನ್ನು ಮೊದಲ ದಿನವೇ ವಿಕ್ಷಿಸಬೇಕೆಂದು ಪ್ರೇಕ್ಷಕರು ಕಿಕ್ಕಿರಿದು ನೆರದಿದ್ದರು. ಒಟ್ಟಾರೆ ನಟಸಾರ್ವಭೌಮ ಅವತಾರಕ್ಕೆ ಗೋಕಾಕಿನ ಪುನಿತ ಅಭಿಮಾನಿಗಳು ಫಿದಾ ಆಗಿದ್ದಾರೆ.
ಇನ್ನು ಕನ್ನಡ ಚಿತ್ರರಂಗದಲ್ಲಿ ಐತಿಹಾಸಿಕ ದಾಖಲೆ ಬರೆದಿದ್ದ ಕೆಜಿಎಫ್ ಚಿತ್ರದ ದಾಖಲೆಯನ್ನು ನಟಸಾರ್ವಭೌಮ ಮುರಿದಿದೆ. ಕೆಜಿಎಫ್ ಚಿತ್ರ ಬೆಂಗಳೂರು ಒಂದರಲ್ಲೇ ಮೊದಲ ದಿನ ಬರೋಬ್ಬರಿ 525 ಪ್ರದರ್ಶನ ಕಂಡಿತ್ತು. ಇದು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲು. ಇನ್ನು ಪುನೀತ್ ಚಿತ್ರ ಈ ದಾಖಲೆ ಮುರಿದಿದ್ದು ಮೊದಲ ದಿನ ಬರೋಬ್ಬರಿ 550 ಪ್ರದರ್ಶನ ಕಾಣಲಿದೆ. ಗುರುವಾರ ತೆರೆಕಾಣಬೇಕಿದ್ದ ಚಿತ್ರವನ್ನು ಅಪ್ಪು ಅಭಿಮಾನಿಗಳು ಬುಧವಾರ ರಾತ್ರಿಯೇ ಬಿಡುಗಡೆ ಮಾಡಿಸಿದ್ದಾರೆ.
ಪುನೀತ್ ನಟಸಾರ್ವಭೌಮ ಚಿತ್ರದಲ್ಲಿ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಗೆ ಜೋಡಿಯಾಗಿ ರಚಿತಾ ರಾಮ್ ಮತ್ತು ಅನುಪಮ ಪರಮೇಶ್ವರನ್ ಅಭಿನಯಿಸಿದ್ದಾರೆ. ಪವನ್ ಒಡೆಯರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಲಕ್ಕಪ್ಪ ನಂದಿ , ರಾಜು, ವಿರೇಶ,ಅಪ್ಪು , ನಿಕೀಲ ನಗರ ಮತ್ತು ತಾಲೂಕಿನಾದ್ಯಂತ ಬಂದಿದ ನೂರಾರು ಜನ ಪುನೀತ್ ಅಭಿಮಾನಿ ಉಪಸ್ಥಿತರಿದ್ದರು