RNI NO. KARKAN/2006/27779|Wednesday, May 20, 2026
You are here: Home » breaking news » ಘಟಪ್ರಭಾ:ಫೆಸ್ ಬುಕ್ ಲೈವ್ ನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಘಟಪ್ರಭಾ:ಫೆಸ್ ಬುಕ್ ಲೈವ್ ನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ 

ಆತ್ಮಹತ್ಯೆಗೆ ಯತ್ನಿಸಿದ ಯುವಕ ಪ್ರವೀಣ ಚಂಡುಗೋಳ

ಫೆಸ್ ಬುಕ್ ಲೈವ್ ನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

 

 
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಅ 22 :

 

 
ಪ್ರೀತಿಸಿದ ಯುವತಿ ಮನೆಯವರಿಂದ ನಿರಂತರ ಕಿರುಕುಳ ಹಿನ್ನೆಲೆಯಲ್ಲಿ ಯುವಕನೋರ್ವ ಪೇಸ್ ಬುಕ್‍ನಲ್ಲಿ ಲೈವ ವಿಡಿಯೋ ಮಾಡಿ ವಿಷ ಸೇವಿಸಿ ಆತ್ಮ ಹತ್ಯೆಗೆ ಯತ್ನಿಸಿದ ಘಟನೆ ಗೋಕಾಕ ತಾಲೂಕಿನ ಅರಭಾಂವಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಪ್ರವೀಣ ಚಂಡುಗೋಳ ಎಂಬಾತನೇ ಲೈವ್ ವಿಡಿಯೋ ಮಾಡಿ ವಿಷ ಸೇವಿಸಿದ ಯುವಕ. ಅದೇ ಗ್ರಾಮದ ಯುವತಿಯನ್ನು 4 ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರವೀಣಗೆ ಯುವತಿಯ ಮನೆಯವರಿಂದ ಕಿರುಕಳ ನೀಡಲಾಗುತ್ತಿತ್ತು.
ಈ ವಿಷಯವನ್ನು ವಿಷ ಸೇವನೆಗೂ ಮುಂಚೆ ತನ್ನ ಸಾವಿಗೆ ಯುವತಿಯ ಮನೆಯವರಾದ ಬಸು, ತುಕಾರಾಮ, ಮಹಾದೇವ, ಈರಪ್ಪ ಕಾರಣ ಎಂದು ಹೆಸರು ಹೇಳಿ ವಿಷ ಸೇವಿಸಿದ್ದಾನೆ.
ಯುವಕ ಪ್ರವೀಣ ತೀವ್ರ ಅಸ್ವಸ್ಥನಾಗಿದ್ದು, ಗೋಕಾಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ ಎಂದು ತಿಳಿದು ಬಂದಿದ್ದು, ಘಟಪ್ರಭಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts: