ಬೆಳಗಾವಿ :ತಲ್ವಾರನಿಂದ ಕೆಕ್ ಕತ್ತರಿಸಿದ ಬಿಜೆಪಿ ಮುಖಂಡ ಅಂದರ್
ತಲ್ವಾರನಿಂದ ಕೆಕ್ ಕತ್ತರಿಸಿದ ಬಿಜೆಪಿ ಮುಖಂಡ ಅಂದರ್
ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಫೆ 5 :
ತಲ್ವಾರನಿಂದ ಕೆಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡ ಬೆಳಗಾವಿಯ ಬಿಜೆಪಿ ಮುಖಂಡ ಈಗ ಪೊಲೀಸರ ಅತಿಥಿಯಾಗಿದ್ದಾನೆ
ಬೆಳಗಾವಿ ಮಹಾನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಿಖಿಲ್ ಮುರ್ಕುಟೆ ಬಂಧಿತರು. ಫೆ. 1ರಂದು ಹಳೇ ಗಾಂಧಿನಗರದಲ್ಲಿ ತಲ್ವಾರ್ನಿಂದ ನಿಖಿಲ್ ಕೇಕ್ ಕತ್ತರಿಸಿ, ಜನ್ಮದಿನ ಆಚರಿಕೊಂಡಿದ್ದರು. ತಲ್ವಾರ್ನಿಂದ ಕೇಕ್ ಕತ್ತರಿಸಿದ್ದ ನಿಖಿಲ್ ಮುರ್ಕುಟೆ ಜತೆಗೆ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ ಹಾಗೂ ಮಾಜಿ ಶಾಸಕ ಸಂಜಯ್ ಪಾಟೀಲ ಕೈ ಜೋಡಿಸಿದ್ದು ವಿಶೇಷವಾಗಿತ್ತು.
ಪುಡಿ ರೌಡಿಗಳಷ್ಟೇ ಈ ಮೊದಲು ತಲ್ವಾರ್ನಿಂದ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದರು. ಇದೀಗ ಬಿಜೆಪಿ ನಾಯಕರು ತಲ್ವಾರ್ನಿಂದ ಕೇಕ್ ಕತ್ತರಿಸಿದ್ದು ಚರ್ಚೆಗೆ ಗ್ರಾಸವಾಗಿದೆ.