RNI NO. KARKAN/2006/27779|Saturday, August 2, 2025
You are here: Home » breaking news » ಚಿಕ್ಕೋಡಿ:ಅನೈತಿಕ ಸಂಬಂಧ ಪತಿಯಿಂದಲೇ ಪತ್ನಿಯ ಕೊಲೆ : ಸದಲಗಾ ಪಟ್ಟಣದಲ್ಲಿ ಘಟನೆ

ಚಿಕ್ಕೋಡಿ:ಅನೈತಿಕ ಸಂಬಂಧ ಪತಿಯಿಂದಲೇ ಪತ್ನಿಯ ಕೊಲೆ : ಸದಲಗಾ ಪಟ್ಟಣದಲ್ಲಿ ಘಟನೆ 

ಅನೈತಿಕ ಸಂಬಂಧ ಪತಿಯಿಂದಲೇ ಪತ್ನಿಯ ಕೊಲೆ : ಸದಲಗಾ ಪಟ್ಟಣದಲ್ಲಿ ಘಟನೆ

ಚಿಕ್ಕೋಡಿ ಅ 4: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಹಾಡು ಹಗಲೇ ಪತಿಯೇ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಘಟನೆ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ನಡೆದಿದೆ
ಸದಲಗಾ ಪಟ್ಟಣದ ಗೌಂಡಿ ಪ್ಲಾಟ್ ನಲ್ಲಿ ವಾಸಿಸುತ್ತಿದ ಸುನೀತಾ ನಾನಾಸಾಬ ಕೋಗಲೆ (೩೫) ಕೊಲೆಯಾದ ಮಹಿಳೆಯಾಗಿದ್ದಾಳೆ . ಮನೆಯಲ್ಲಿ ಯಾರೂ ಇಲ್ಲದ ವೇಳೆ ಪ್ರಿಯಕರನೊಂದಿಗೆ ಸಿಕ್ಕಿಬಿದ್ದ ಸುನಿತಾಳನ್ನು ಪತಿ ನಾನಾಸಾಬ ಕಲ್ಲಿನಿಂದ ಜಜ್ಜಿ ಕೊಲೇ ಮಾಡಿದ್ದಲ್ಲದೆ ಸುನೀತಾ ಳ ಪ್ರಿಯಕರ ರಾಹುಲ್ ಮರಜಕ್ಕೆ ಮೇಲೂ ಸಹ ಹಲ್ಲೆ ನಡೆಸಿದ್ದಾನೆಂದು ಹೇಳಲಾಗುತ್ತಿದೆ

ಗಂಭೀರ ಗಾಯಗೊಂಡಿರುವ ರಾಹುಲನನ್ನು ಚಿಕ್ಕೋಡಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ ಈ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related posts: