RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಮತದಾರರ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ

ಗೋಕಾಕ:ಮತದಾರರ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ 

ಮತದಾರರ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ

ಬೆಟಗೇರಿ ಜ 25 : ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ ಶುಕ್ರವಾರ ಜ.25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ಹಾಗೂ ಜಾಗೃತಿ ಜಾಥಾ ಕಾರ್ಯಕ್ರಮ ಜರುಗಿತು.
ಸ್ಥಳೀಯ ಬಿಎಲ್‍ಒ ಎಸ್.ಬಿ.ಸನದಿ ಅವರು, ಮತದಾನ ಹಕ್ಕು, ಮಹತ್ವ, ಸಂವಿದಾನದ ಹಾಗೂ ಮತದಾರರ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಲ್ಲಿಯ ಬಿಎಲ್‍ಒ ಗಳು ಸೇರಿದಂತೆ ಹಲವು ಜನ ಗಣ್ಯರು, ಶಾಲೆಯ ಶಿಕ್ಷಕರು, ಸ್ಥಳೀಯರು ಮತದಾರರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಶಾಲಾ ಮಕ್ಕಳಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಜಾಗೃತಿ ಜಾಥಾ ನಡೆಯಿತು.
ಗ್ರಾಮಲೆಕ್ಕಾಧಿಕಾರಿ ಜೆ.ಎಂ.ನದಾಫ್, ಮಲ್ಲಪ್ಪ ಪಣದಿ, ಉಭಯ ಶಾಲೆಗಳ ಮುಖ್ಯ ಶಿಕ್ಷಕರಾದ ವೈ.ಸಿ.ಶೀಗಿಹಳ್ಳಿ, ಆರ್.ಬಿ.ಬೆಟಗೇರಿ, ಎಮ್.ಎಸ್.ಪಾಟೀಲ, ಎಸ್.ಜಿ. ಮಠಪತಿ, ರುದ್ರಪ್ಪ ಕಾಡವ್ವಗೋಳ, ಶೋಭಾ ದೇಯಣ್ಣವರ, ಶಾಲೆಯ ಶಿಕ್ಷಕರು, ಉಭಯ ಶಾಲೆಗಳ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ, ಸ್ಥಳೀಯರು, ಇತರರು ಇದ್ದರು.

Related posts: