RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಖಾಸಗಿ ವಾಹನಗಳು ರಸ್ತೆಯಲ್ಲಿ ಬದಿ ಬೇಕಾಬಿಟ್ಟಿ ನಿಲ್ಲುಗಡೆ : ಪಾದಚಾರಿಗಳಿಗೆ ತೊಂದರೆ

ಗೋಕಾಕ:ಖಾಸಗಿ ವಾಹನಗಳು ರಸ್ತೆಯಲ್ಲಿ ಬದಿ ಬೇಕಾಬಿಟ್ಟಿ ನಿಲ್ಲುಗಡೆ : ಪಾದಚಾರಿಗಳಿಗೆ ತೊಂದರೆ 

ಖಾಸಗಿ ವಾಹನಗಳು ರಸ್ತೆಯಲ್ಲಿ ಬದಿ ಬೇಕಾಬಿಟ್ಟಿ ನಿಲ್ಲುಗಡೆ : ಪಾದಚಾರಿಗಳಿಗೆ ತೊಂದರೆ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ, 14 ;-

 

ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಬಸವೇಶ್ವರ ವೃತ್ತದಿಂದ ಬಸ್ ನಿಲ್ದಾಣದವರೆಗಿನ ರಸ್ತೆಯಲ್ಲಿ ಪಾದಚಾರಿಗಳ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದ್ದು, ಶಾಲಾ ಮಕ್ಕಳು ಕೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬಸ್ ನಿಲ್ದಾಣದ ಹತ್ತಿರ ಖಾಸಗಿ ವಾಹನಗಳು ಅಡ್ಡಾದಿಡ್ಡಿಯಾಗಿ ನಿಲ್ಲುವದರಿಂದ ಪಾದಚಾರಿಗಳು ಹಾಯ್ದಾಡುವದೇ ದುಸ್ತರವಾಗಿದೆ. ಮುಂಜಾನೆ ಶಾಲೆ-ಕಾಲೇಜಿಗೆ ಹೋಗುವಾಗ ಮತ್ತು ಸಂಜೆ ಶಾಲೆ-ಕಾಲೇಜದಿಂದ ಹಿಂತಿರುಗುವಾಗ ಚಿಕ್ಕ ಪುಟ್ಟ ಶಾಲಾ ಮಕ್ಕಳು ಹಾಗೂ ಕಾಲೇಜ ವಿದ್ಯಾರ್ಥಿಗಳು ವಾಹನಗಳ ಭರಾಟೆಯ ರಸ್ತೆಯಲ್ಲಿ ನಡೆಯುವದೇ ದುಸ್ತರವಾಗಿದೆ. ಖಾಸಗಿ ವಾಹನಗಳು ರಸ್ತೆಯಲ್ಲಿ ಬೇಕಾಬಿಟ್ಟಿ ನಿಲ್ಲುವದರಿಂದ ಪಾದಚಾರಿಗಳು ಕೂಡ ಸಂಚರಿಸಲು ತೊಂದರೆಯಾಗುತ್ತಿದೆ. ಇದನ್ನು ನೋಡಬೇಕಾದ ಪೊಲೀಸ ಇಲಾಖೆಯು ಕೇವಲ ದ್ವಿಚಕ್ರ ವಾಹನಗಳ ಹಿಂದೆಯೇ ಬಿದ್ದಿರುವುದು ವಿಪರ್ಯಾಸದ ಸಂಗತಿಯಾಗಿದೆ. ದ್ವಿಚಕ್ರ ವಾಹನ ಸವಾರರಿಗೆ ಒಂದು ಕಾನೂನು ಹಾಗೂ ಖಾಸಗೀ ಮಿನಿ ಬಸ್‍ಗಳಿಗೆ ಒಂದು ಕಾನೂನೇ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ. ಅದು ಕೂಡಾ ಮುಂಜಾನೆ ಹಾಗೂ ಸಂಜೆ ವೇಳೆಯಲ್ಲಿ ಒಂದು ಭಾರಿ ಮಾತ್ರ ನೋಡಿದರೆ ಮುಗಿಯಿತು. ಉಳಿದ ಸಮಯದಲ್ಲಿ ಇವರನ್ನು ಕೇಳುವವರೇ ಇಲ್ಲವಾಗಿದ್ದಾರೆÉ.
ಖಾಸಗೀ ಮಿನಿ ಬಸ್‍ನವರು ನಗರ ಠಾಣೆಯ ಕೂದಲಳತೆಯಲ್ಲಿಯೇ ರಸ್ತೆಯ ಮೇಲೆ ವಾಹನಗಳನ್ನು ನಿಲ್ಲಿಸಿದರೂ ಸಹ ಅದನ್ನು ಕಂಡರಿಯದಂತೆ ವರ್ತಿಸುವ ಪೊಲೀಸರ ಕ್ರಮ ಪ್ರಶ್ನಾತೀತವಾಗಿದೆ.
ಅದೇ ರೀತಿ ನಗರದಲ್ಲಿ ಓಡಾಡುತ್ತಿರುವಂತಹ ಆಟೋ ರಿಕ್ಷಾ ಚಾಲಕರಿಗೆ ಸಮವಸ್ತ್ರವೇ ಇಲ್ಲವಾಗಿದೆ. ಅದರಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗರು ಅಟೋರಿಕ್ಷಾ ಚಲಾಯಿಸುವದರಿಂದ ಯಾವಾಗ ಏನು ಅನಾಹುತ ಆಗುತ್ತದೆ ಎಂಬುದನ್ನು ಹೇಳುವದಕ್ಕೆ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ನಗರ ಠಾಣೆ ಪಿಎಸ್‍ಐ ಅನಾರೋಗ್ಯ ನಿಮಿತ್ಯ ರಜೆಯಲ್ಲಿದ್ದಾರೆ. ಗೋಕಾಕ ವಲಯದ ಸಿಪಿಐ ಸ್ಥಾನ ಗೋಕಾಕ ಉಪಚುನಾವಣೆ ಪೂರ್ವದಿಂದಲೇ ಖಾಲಿ ಇದೆ. ಹೀಗಾಗಿ ಪೊಲೀಸರಿಗೆ ಕೇಳುವವರೇ ಇಲ್ಲವಾಗಿದ್ದು, ಅವರು ತಮ್ಮ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾರೆ.
ಜಿಲ್ಲಾ ಪೊಲೀಸ ವರಿಷ್ಠಾದಿಕಾರಿಗಳು ಕೂಡಲೇ ಈ ಕಡೆಗೆ ಗಮನ ನೀಡಿ ಅವಶ್ಯಕ ಕ್ರಮ ಕೈಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Related posts: