RNI NO. KARKAN/2006/27779|Wednesday, May 6, 2026
You are here: Home » breaking news » ಗೋಕಾಕ:ಅರ್ಬನ್ ಬ್ಯಾಂಕಿಗೆ ಬಸವರಾಜ ಕಲ್ಯಾಣಶೆಟ್ಟಿ , ದುಂಡಪ್ಪ ಬಿದರಿ ಅವಿರೋಧ ಆಯ್ಕೆ

ಗೋಕಾಕ:ಅರ್ಬನ್ ಬ್ಯಾಂಕಿಗೆ ಬಸವರಾಜ ಕಲ್ಯಾಣಶೆಟ್ಟಿ , ದುಂಡಪ್ಪ ಬಿದರಿ ಅವಿರೋಧ ಆಯ್ಕೆ 

ಅರ್ಬನ್ ಬ್ಯಾಂಕಿಗೆ ಬಸವರಾಜ ಕಲ್ಯಾಣಶೆಟ್ಟಿ , ದುಂಡಪ್ಪ ಬಿದರಿ ಅವಿರೋಧ ಆಯ್ಕೆ

ಗೋಕಾಕ ಸೆ 1 : ಇಲ್ಲಿಯ ಪ್ರತಿಷ್ಠಿತ ದಿ. ಅರ್ಬನ್ ಕೋ-ಆಪ್. ಕ್ರೆಡಿಟ್ ಬ್ಯಾಂಕಿನ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯು ಶನಿವಾರದಂದು ಸಂಘದ ಕಾರ್ಯಾಲಯದಲ್ಲಿ ಅವಿರೋಧ ಆಯ್ಕೆ ಜರುಗಿತು.
ಅಧ್ಯಕ್ಷರಾಗಿ ಬಸವರಾಜ ಕಲ್ಯಾಣಶೆಟ್ಟಿ, ಉಪಾಧ್ಯಕ್ಷರಾಗಿ ದುಂಡಪ್ಪ ಬಿದರಿ ಅವರು ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಗೊಂಡರು ಎಂದು ಚುನಾವಣಾಧಿಕಾರಿ ಸುರೇಶ ಬಿರಾದಾರ ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರುಗಳಾದ ಜಯಾನಂದ ಮುನವಳ್ಳಿ, ವೀರಣ್ಣ ಬಿದರಿ, ಚಿಂತಾಮಣಿ ತಾರಳಿ, ಸೋಮಶೇಖರ ಮಗದುಮ್ಮ, ಮಲ್ಲಿಕಾರ್ಜುನ ಚುನಮರಿ, ಶೋಭಾ ಕುರಬೇಟ, ಶಾಂತಾದೇವಿ ಘೋಡಗೇರಿ, ಅಶೋಕ ಹೆಗ್ಗಣ್ಣವರ, ಚಂದ್ರಕಾಂತ ಕುರಬೇಟ, ಸುಧೀರ ಅಂಕಲಿ, ಪ್ರಕಾಶ ಮಡೆಪ್ಪಗೋಳ, ಪ್ರಧಾನ ವ್ಯವಸ್ಥಾಪಕ ಎಸ್.ಎಸ್.ಪಾಟೀಲ ಇದ್ದರು.

Related posts: