RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಕುಟುಂಬದ ವಿಷಯ ಬಂದಾಗ ನಾವೆಲ್ಲ ಸಹೋದರರು ಒಂದೇ : ಸಚಿವ ರಮೇಶ ಪುನರ್ ಉಚ್ಚಾರ

ಗೋಕಾಕ:ಕುಟುಂಬದ ವಿಷಯ ಬಂದಾಗ ನಾವೆಲ್ಲ ಸಹೋದರರು ಒಂದೇ : ಸಚಿವ ರಮೇಶ ಪುನರ್ ಉಚ್ಚಾರ 

ಕುಟುಂಬದ ವಿಷಯ ಬಂದಾಗ ನಾವೆಲ್ಲ ಸಹೋದರರು ಒಂದೇ : ಸಚಿವ ರಮೇಶ ಪುನರ್ ಉಚ್ಚಾರ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 28 :

 
ನಾನು ಮತ್ತು ಲಖನ್ ಜಾರಕಿಹೊಳಿ ರಾಜಕೀಯವಾಗಿ ಬೇರೆ ಬೇರೆ , ಕುಟುಂಬದ ವಿಷಯ ಬಂದಾಗ ನಾವೆಲ್ಲ ಸಹೋದರರು ಒಂದೇ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ  ಪುನರ್ ಉಚ್ಚಾರ ಮಾಡಿದರು

ರವಿವಾರದಂದು ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ರಾಜಕೀಯವಾಗಿ ಯುವ ಮುಖಂಡ ಲಖನ್ ಜಾರಕಿಹೊಳಿ ಮತ್ತು ನನ್ನ ನಡೆ ಬೇರೆ ,ಬೇರೆ ಆಗಿದ್ದರೂ ಸಹ ಕುಟುಂಬದ ವಿಷಯ ಬಂದಾಗ ನಾವೆಲ್ಲ ಸಹೋದರರು ಒಂದೇ ಎಂದು ಈಗಲ್ಲಾ ಉಪ ಚುನಾವಣೆ ಗೆದ್ದ ದಿನದಂದೆ ಹೇಳಿದ್ದೇನೆ. ನನ್ನ ಮತ್ತು ಸಹೋದರ ಲಖನ್ ಭೇಟಿಗೆ ಬೇರೆ ಅರ್ಥ ಕಲ್ಪಿಸಬೇಕಿಲ್ಲಾ ನಮ್ಮ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಖದ್ದು ನಾನೇ ಅವರನ್ನು ಆಹ್ವಾನಿಸಿದ್ದೆ. ಅವರು ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಕುಶಲೋಪರಿ ವಿಚಾರಿಸಿದ್ದಾರೆ ಅಷ್ಟೆ ಎಂದು ಸಚಿವ ರಮೇಶ ಹೇಳಿದರು.

ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಕೇಳಲಾದ ಪ್ರಶ್ನೆ ಒಂದಕ್ಕೆ ಉತ್ತರಿಸಿದ ಅವರು ಈ ವಿಷಯವನ್ನು ರಾಜ್ಯ ಮಟ್ಟದಲ್ಲಿ ಚರ್ಚಿಸಿ ಜನರಿಗೆ ಹೊರೆಯಾಗದಂತೆ ನೋಡಿಕೊಳ್ಳಲು ಕ್ರಮ ಜರುಗಿಸಲಾಗುವದು ಎಂದರು

Related posts: