ಗೋಕಾಕ:ಹಿರಿಯ ನಾಗರೀಕರ ಅನುಭವ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಬುನಾದಿಯಾಗಿದೆ : ಅಮೃತಕ್ಕ ಮುನವಳ್ಳಿ

ಹಿರಿಯ ನಾಗರೀಕರ ಅನುಭವ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಬುನಾದಿಯಾಗಿದೆ : ಅಮೃತಕ್ಕ ಮುನವಳ್ಳಿ
ಗೋಕಾಕ ಆ 9 : ಹಿರಿಯ ನಾಗರೀಕರ ಅನುಭವ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಬುನಾದಿಯಾಗಿದೆ ಎಂದು ಶ್ರೀಮತಿ ಅಮೃತಕ್ಕ ಮುನವಳ್ಳಿ ಹೇಳಿದರು.
ಶನಿವಾರದಂದು ನಗರದ ರೋಟರಿ ರಕ್ತ ಭಂಡಾರದ ಸಭಾ ಭವನದಲ್ಲಿ ಇನ್ನರವ್ಹಿಲ್ ಸಂಸ್ಥೆಯವರು ಹಮ್ಮಿಕೊಂಡ ಹಿರಿಯ ನಾಗರೀಕರ ಸನ್ಮಾನ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಹಿರಿಯರನ್ನು ಗೌರವಿಸಿ, ಅವರ ಮಾರ್ಗದರ್ಶನದಲ್ಲಿ ನಡೆದರೇ ನೆಮ್ಮದಿಯ ಬದುಕು ಸಾಧ್ಯ. ಆಧ್ಯಾತ್ಮಕತೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿರಿ, ಸತ್ಸಂಗದಲ್ಲಿ ಪಾಲ್ಗೊಂಡು ಮಹಾತ್ಮರ ನುಡಿಗಳನ್ನು ಆಚರಣೆಗೆ ತರಬೇಕು. ತಮ್ಮ ಮಕ್ಕಳಲ್ಲೂ ಉತ್ತಮ ಸಂಸ್ಕಾರ ಬೆಳೆಸಿ ಒಳ್ಳೆಯ ನಾಗರೀಕರನ್ನಾಗಿ ಮಾಡುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಇನ್ನರವ್ಹಿಲ್ ಸಂಸ್ಥೆಯ ಅಧ್ಯಕ್ಷೆ ಅನುಸೂಯಾ ಧೂಳಾಯಿ, ಕಾರ್ಯದರ್ಶಿ ವಿದ್ಯಾ ಮಗದುಮ್ಮ, ಖಜಾಂಚಿ ರಾಜೇಶ್ವರಿ ಕಲ್ಲೋಳ್ಳಿ ಹಾಗೂ ಸದಸ್ಯರು ಇದ್ದರು.
