RNI NO. KARKAN/2006/27779|Wednesday, March 18, 2026
You are here: Home » breaking news » ಗೋಕಾಕ:ಬಡ ಮಕ್ಕಳಿಗೆ ಹಾಗೂ ರೋಗಿಗಳಿಗೆ ಹಾಲು ವಿತರಣೆ

ಗೋಕಾಕ:ಬಡ ಮಕ್ಕಳಿಗೆ ಹಾಗೂ ರೋಗಿಗಳಿಗೆ ಹಾಲು ವಿತರಣೆ 

ಬಡ ಮಕ್ಕಳಿಗೆ ಹಾಗೂ ರೋಗಿಗಳಿಗೆ ಹಾಲು ವಿತರಣೆ

ಗೋಕಾಕ ಅ 12 : ನಾಗರ ಪಂಚಮಿಯ ಹೆಸರಿನಲ್ಲಿ ಹಾಲನ್ನು ಪೋಲು ಮಾಡುವದನ್ನು ಬಿಟ್ಟು ಬಡ ರೋಗಿಗಳಿಗೆ ಹಾಲನ್ನು ವಿತರಿಸುತ್ತ ಬರುತ್ತಿರುವ ಮಾನವ ಬಂದುತ್ವ ವೇದಿಕೆಯ ಕಾರ್ಯ ಶ್ಲಾಘನೀಯ ಎಂದು ಮುಖ್ಯ ವೈದ್ಯಾಧಿಕಾರಿ ಆರ್ ಎಸ್ ಬೆಣಚಿನಮರಡಿ ಹೇಳಿದರು.
ಅವರು, ರವಿವಾರದಂದು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾನವ ಬಂದುತ್ವ ವೇದಿಕೆ ಗೋಕಾಕ ತಾಲೂಕ ಘಟಕದ ವತಿಯಿಂದ ಬಸವ ಪಂಚಮಿ ನಿಮಿತ್ಯವಾಗಿ ಹಮ್ಮಿಕೊಂಡಿದ್ದ ಹಾಲು ಹಾಗೂ ಹಣ್ಣು ಹಂಪಲ ವಿತರಣೆ ಕಾರ್ಯಕ್ರಮದಲ್ಲಿ ಬಡ ಮಕ್ಕಳಿಗೆ ಹಾಗೂ ರೋಗಿಗಳಿಗೆ ಹಾಲು ವಿತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ. ಮಹೇಶ ಕೋಣಿ, ಮಾನವ ಬಂದುತ್ವ ವೇದಿಕೆಯ ಗೋಕಾಕ ತಾಲೂಕ ಘಟಕದ ಶ್ರೀಮತಿ ಲಕ್ಷ್ಮೀ ನಾಗಪ್ಪಗೋಳ, ರಾಜೇಶ್ವರಿ ಗೂಂಡಿ, ಮಹಾಂತೇಶ ತಳವಾರ, ರವಿ ಬಂಗಾರಿ, ಪ್ರಕಾಶ ಸನದಿ, ರವಿ ಕುದರಿ ಸೇರಿದಂತೆ ಇತರರು ಇದ್ದರು.

Related posts: