RNI NO. KARKAN/2006/27779|Tuesday, August 5, 2025
You are here: Home » breaking news » ಗೋಕಾಕ:ಜ್ಞಾನ, ದ್ಯೇಯ ಇಟ್ಟುಕೊಂಡು ಮುನ್ನುಗ್ಗಿದರೆ ಜಗತ್ತನ್ನೇ ಗೆಲ್ಲಬಹುದು : ಸಿದ್ದಾರ್ಥ ವಾಡೆನ್ನವರ

ಗೋಕಾಕ:ಜ್ಞಾನ, ದ್ಯೇಯ ಇಟ್ಟುಕೊಂಡು ಮುನ್ನುಗ್ಗಿದರೆ ಜಗತ್ತನ್ನೇ ಗೆಲ್ಲಬಹುದು : ಸಿದ್ದಾರ್ಥ ವಾಡೆನ್ನವರ 

ಜ್ಞಾನ, ದ್ಯೇಯ ಇಟ್ಟುಕೊಂಡು ಮುನ್ನುಗ್ಗಿದರೆ ಜಗತ್ತನ್ನೇ ಗೆಲ್ಲಬಹುದು : ಸಿದ್ದಾರ್ಥ ವಾಡೆನ್ನವರ

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 29 :

 

 

ಬಸವರಾಜ ಕಟ್ಟಿಮನಿ ವೇದಿಕೆ :
ಯುವಶಕ್ತಿ ದೇಶದ ಸಂಪತ್ತು . ಜ್ಞಾನ, ಧ್ಯೆಯ ಇಟ್ಟುಕೊಂಡು ಮುನ್ನುಗ್ಗಿದರೆ ಜಗತ್ತನ್ನೇ ಗೆಲ್ಲಬಹುದು ಎಂದು ಸತೀಶ ಶುಗರ್ಸ ಕಾರಖಾನೆಯ ವ್ಯವಸ್ಥಾಪಕ ನಿದೇರ್ಶಕ ಹಾಗೂ ಲೇಖಕ ಸಿದ್ದಾರ್ಥ ವಾಡೆನ್ನವರ ಹೇಳಿದರು

ನಗರದ ಕೆಎಲ್‍ಇ ಆಂಗ್ಲ ಮಾಧ್ಯಮ ಶಾಲೆಯ ಆವರಣದ ಒಳಾಂಗದಲ್ಲಿ ಜರುಗುತ್ತಿರುವ ಬೆಳಗಾವಿ ಜಿಲ್ಲಾ 13ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ವೈಚಾರಿಕ ಗೋಷ್ಠಿಯಲ್ಲಿ ಯುವ ಜನಾಂಗದ ತವಕ-ತಲ್ಲಣ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.

ಇಂದಿನ ಯುವಕರು ಅನುಕರಣೆ ಮಾಡುವದನ್ನು ಬಿಟ್ಟು ತನ್ನ ವೈಯಕ್ತಿಕ ಜ್ಞಾನದ ಬಲದ ಮೇಲೆ ಕಾರ್ಯ ಚಟುವಟಿಕೆಗಳನ್ನು ಮಾಡಿದರೆ ಯಶಸ್ಸು ಕಾಣಲು ಸಾಧ್ಯ ಆ ನಿಟ್ಟಿನಲ್ಲಿ ಯುವ ಜನಾಂಗ ಯೋಚಿಸಬೇಕು .

ಸರಕಾರಗಳು ಪ್ರತಿ ವರ್ಷ ತಮ್ಮ ಬಜೆಟಗಳಲ್ಲಿ ಮೂಲಸೌಕರ್ಯಗಳಲ್ಲಿ ಖರ್ಚು ಮಾಡುವ 10% ಪ್ರತಿಶತ ದುಡ್ಡನ್ನು ಶಿಕ್ಷಣಕ್ಕಾಗಿ ಖರ್ಚು ಮಾಡಿದರೆ ದೇಶವನ್ನು ಉತ್ತಂಗಕ್ಕೆ ಒಯ್ಯಲು ಸಾಧ್ಯ. 2.50 ಲಕ್ಷ ಪಂಚಾಯಿತಿಗಳಿರುವ ನಮ್ಮ ರಾಜ್ಯದಲ್ಲಿ ಸರಕಾರ ಮನಸ್ಸು ಮಾಡಿ ಪ್ರತಿ ಪಂಚಾಯಿತಿಗೆ ಒಂದರಂತೆ ಸಿ.ಬಿ.ಎಸ್.ಸಿ ಶಾಲೆಗಳನ್ನು ಪ್ರಾರಂಭಿಸಿ ಗುಣಮಟ್ಟದ ಶಿಕ್ಷಣ ನೀಡಿದರೆ ಭಾರತ ಅಮೆರಿಕಾ ದೇಶವನ್ನು ಹಿಂದೆ ಹಾಕಬಹುದಾಗಿದೆ . ಆದರೆ 50 ಲಕ್ಷ ಕೋಟಿ ರೂ ಗಿಂತಲೂ ಹೆಚ್ಚು ತೆರಿಗೆ ಬಂಜರೂ ಸಹ ಸರಕಾರಗಳು ದೇಶವನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಮಾಡಲು ಹಿಂದೆಟ್ಟು ಹಾಕುತ್ತಿರುವದು ಖೇದಕರವಾಗಿದೆ. ಭಾರತದಲ್ಲಿ ಶೈಕ್ಷಣಿಕ ನಿಯಮಗಳು ಗಟ್ಟಿ ಇಲ್ಲದ ಪರಿಣಾಮ ಭಾರತವು ಹಿಂದುಳಿದಿದೆ ಎಂದ ವಾಡೆನ್ನವರ ನೂರಕ್ಕೆ ನೂರರಷ್ಟು ಗಮನವಿಟ್ಟು ಯಾವುದೇ ಕಾರ್ಯ ಮಾಡಿದರೆ ನಾವು ಯಶಸ್ವಿಯಾಗಲು ಸಾಧ್ಯವೆಂದರು .

ನಿಜಗುಣಾನಂದ ಮಹಾಸ್ವಾಮಿಗಳು ವೈಚಾರಿಕ ಗೋಷ್ಠಿಯ ದಿವ್ಯ ಸಾನಿಧ್ಯವನ್ನು ವಹಿಸಿ ಆರ್ಶಿವಚನ ನೀಡಿದರು. ಅಧ್ಯಕ್ಷತೆಯನ್ನು ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯ ಮೌಲ್ಯಮಾಪನ ಮುಖ್ಯಸ್ಥರಾದ ಡಾ.ರಂಗರಾಜ ವನದುರ್ಗ ವಹಿಸಿದರು . ಮೂಡಲಗಿಯ ಚಿಂತಕ ಡಾ.ಜಿಡ್ಡೀಮನಿ ಆಶಯ ನುಡಿಗಳನ್ನಾಡಿದರು .

ಗೋಷ್ಠಿಯನ್ನು ಶ್ರೀಮತಿ ವಿದ್ಯಾ ಗುಲ್ಲ ನಿರೂಪಿಸಿದರು . ವೇದಿಕೆಯಲ್ಲಿ ರಾಜು ವಾಲಿ , ಸೋಮಶೇಖರ ಹಲಸಗಿ , ಕಸಾಪ ತಾಲೂಕ ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು

Related posts: