RNI NO. KARKAN/2006/27779|Saturday, June 14, 2025
You are here: Home » breaking news » ಗೋಕಾಕ:ನಾಪತ್ತೆಯಾಗಿದ್ದ ತಾಯಿ – ಮಕ್ಕಳು ಶವವಾಗಿ ಪತ್ತೆ

ಗೋಕಾಕ:ನಾಪತ್ತೆಯಾಗಿದ್ದ ತಾಯಿ – ಮಕ್ಕಳು ಶವವಾಗಿ ಪತ್ತೆ 

ನಾಪತ್ತೆಯಾಗಿದ್ದ ತಾಯಿ – ಮಕ್ಕಳು ಶವವಾಗಿ ಪತ್ತೆ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 14 :

ಕಾಣೆಯಾಗಿದ್ದ ತಾಯಿ ಮತ್ತು ಇಬ್ಬರು ಮಕ್ಕಳು ನದಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ಲೋಳಸೂರ ಸೇತುವೆಯ ಬಳಿ ಘಟಪ್ರಭಾ ನದಿಯಲ್ಲಿ ಭಾನುವಾರ ನಡೆದಿದೆ.  

ಮೃತರನ್ನು ಗೋಕಾಕ ತಾಲೂಕಿನ ದುರದುಂಡಿ ಗ್ರಾಮದ ಸಾವಿತ್ರಿ ಬನಾಜ(33), ಪೂಜಾ (4), ಸಹನಾ(2) ಎಂದು ಗುರುತಿಸಲಾಗಿದ್ದು, ತಾಯಿ ಇಬ್ಬರು ಮಕ್ಕಳನ್ನು ತನ್ನ ಸೀರೆಗೆ ಕಟ್ಟಿಕೊಂಡು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕಳೆದ ಎರಡು ದಿನಗಳ ಹಿಂದೆ ಇಬ್ಬರು ಮಕ್ಕಳೊಂದಿಗೆ ಸಾವಿತ್ರಿ ನಾಪತ್ತೆಯಾಗಿದ್ದರು. ಇಂದು ಘಟಪ್ರಭಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 
ಸ್ಥಳಕ್ಕೆ ಗೋಕಾಕ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಕಾಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Related posts: