ಮೂಡಲಗಿ:ನಿವೃತ್ತ ದುಂಡಪ್ಪ ನಿಡಗುಂದಿಗೆ ಸತ್ಕರಾ
ನಿವೃತ್ತ ದುಂಡಪ್ಪ ನಿಡಗುಂದಿಗೆ ಸತ್ಕರಾ
ಮೂಡಲಗಿ ಜು 21 : ದಿ.ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಇಲ್ಲಿಯ ಶಾಖೆಯಲ್ಲಿ ಇಂದು ನೀವೃತಿ ಹೊಂದಿದ ಪ್ರಯುಕ್ತ ಸ್ಥಳೀಯ ದ್ವಿ.ದ ಗುಮಾಸ್ತ ದುಂಡಪ್ಪ .ಸಿ.ನಿಡಗುಂದಿ ಅವರನ್ನು ಶಾಖೆಯ ಸಿಬ್ಬಂದಿ ಮತ್ತು ಮೂಡಲಗಿ ಭಾಗದ ಪಿಕೆಪಿಎಸ್ ಸಂಘಗಳಿಂದ ಶನಿವಾರ ಸತ್ಕರಿ ಬಿಳ್ಕೋಟರು.
ಪಟಗುಂದಿ ಪಿಕೆಪಿಎಸ್ ಕಾರ್ಯದರ್ಶಿ ಅಜೀತ ಹೊಸಮನಿ ಮಾತನಾಡಿ, ನಿಡಗುಂದಿ ಅವರು ಸುಮಾರು 39 ವರ್ಷಗಳ ಕಾಲ ಸೇವೆಯಲ್ಲಿ ಈ ಭಾಗದ ಪ್ರಾಥಮಿಕ ಕೃಷಿ ಪತಿನ ಸಹಕಾರ ಸಂಘಗಳು ಬೆಳೆಯಲ್ಲಿಕ್ಕೆ ಇವರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಗುರ್ಲಾಪೂರ ಪಿಕೆಪಿಎಸ್ ಕಾರ್ಯದರ್ಶಿ ಶಿವಬಸು ಹಂಚಿನಾಳ ಮಾತನಾಡಿ, ಸರಳ ವ್ಯಕ್ತಿಯಾದ ನಿಡಗುಂದಿ ಕಾರ್ಯ ಇಂದಿನ ಯುವ ಸಿಬ್ಬಂದಿಗೆ ಮಾದರಿಯಾಗಿದಾರೆ ಎಂದರು.
ಈ ಸಂದರ್ಭದಲ್ಲಿ ಶಾಖಾ ವ್ಯವಸ್ಥಾಪಕರಾದ ಆನಂದ ಮೂಡಲಗಿ, ಗೋಪಾಲ ಲಂಕೆಪ್ಪನ್ನವರ, ಬ್ಯಾಂಕ ನಿರೀಕ್ಷಕ ಮಾಂತೇಶ ನಂದಗಾವಮಠ, ಶಾಖಾ ಸಿಬ್ಬಂದಿಗಳಾದ ಪ್ರಶಾಂತ ಸಣ್ಣಕ್ಕಿ, ಕಿರಣ ಹೊನ್ನವಾಡ, ಪ್ರಕಾಶ ಬಂಡಿ, ವಿಶ್ವನಾಥ ಗಿಡ್ಡರೇವಣ್ಣವರ, ಮಲ್ಲಪ್ಪ ಮಾಳ್ಯಾಗೋಳ, ವಿಶ್ವನಾಥ ಜೋತಾವರ ಮತ್ತು ಮೂಡಲಗಿ ಭಾಗದ ಪಿಕೆಪಿಎಸ್ ಸಂಘಗಳ ಕಾರ್ಯದರ್ಶಿ ಮಲ್ಲಿಕಾರ್ಜುನ ನಿಡಸೋಸಿ, ಅಶೋಕ ಮಾಹಾರಡ್ಡಿ, ಬಾಳಪ್ಪ ಮದಲಮಟ್ಟಿ, ರಾಮಣ್ಣಾ ಗೌರವಗೋಳ, ಮಹಾದೇವ ಬೆಳಗಲಿ, ಜಗದೀಶ ಬಳಿಗಾರ, ವಿಠ್ಠಲ ಪೂಜೇರಿ, ಸಿದ್ದಾರೂಢ ಕಂಬಳ್ಳಿ ಮತ್ತಿತರು ಭಾಗವಹಿಸಿದ್ದರು.