RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಸದೃಢ ಆರೋಗ್ಯದಿಂದ ಉತ್ತಮ ಜೀವನ ನಿರ್ಮಾಣ ಸಾಧ್ಯ : ಸಚಿವ ರಮೇಶ

ಗೋಕಾಕ:ಸದೃಢ ಆರೋಗ್ಯದಿಂದ ಉತ್ತಮ ಜೀವನ ನಿರ್ಮಾಣ ಸಾಧ್ಯ : ಸಚಿವ ರಮೇಶ 

ಸದೃಢ ಆರೋಗ್ಯದಿಂದ ಉತ್ತಮ ಜೀವನ ನಿರ್ಮಾಣ ಸಾಧ್ಯ : ಸಚಿವ ರಮೇಶ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 19 :

 
ಸದೃಢ ಆರೋಗ್ಯದಿಂದ ಉತ್ತಮ ಜೀವನ ಸಾಧ್ಯ , ಯುವ ಪೀಳಿಗೆ ಆರೋಗ್ಯ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಹೇಳಿದರು.

ಸೋಮವಾರದಂದು ನಗರದ ಸಚಿವರ ಕಾರ್ಯಾಲಯದ ಆವರಣದಲ್ಲಿ ಶಾಸಕರ ಅನುದಾನದಡಿ ಗೋಕಾಕ ಮತಕ್ಷೇತ್ರದ 25 ಗ್ರಾಮಗಳ ಶಾಲೆಗಳಿಗೆ 1.75 ಕೋಟಿ ರೂಗಳ ವ್ಯಾಯಾಮ ಪರಿಕರಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು
ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯದ ರಕ್ಷಣೆ ಅತಿ ಮುಖ್ಯವಾಗಿದೆ. ಯುವ ಪೀಳಿಗೆ ಯೋಗ ಹಾಗೂ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳುವದರಿಂದ ಆರೋಗ್ಯವಂತರಾಗಿ ರೋಗ ರುಜಿನಗಳಿಂದಲೂ ದೂರ ವಿರಬಹುದು , ದುಶ್ಚಟಗಳಿಂದ ದೂರವಿದ್ದು ಇಂತಹ
ಒಳ್ಳೆಯ ಹವ್ಯಾಸಗಳಲ್ಲಿ ತೊಡಗಿಸಿಕೊಂಡು ತಾವು ಸದೃಢರಾಗಿ ಬಲಿಷ್ಠ ಭಾರತ ನಿರ್ಮಿಸಲು ಶ್ರಮಿಸುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಟಿ.ಆರ್.ಕಾಗಲ್ , ಮಡೆಪ್ಪ ತೋಳಿನವರ, ಮುಖಂಡರುಗಳಾದ ಭೀಮಗೌಡ ಪೋಲೀಸಗೌಡರ , ಹನುಮಂತ ದುರ್ಗನ್ನವರ , ಭೀಮಶಿ ಭರಮಣ್ಣವರ , ಜಯಾನಂದ ಹುಣಚ್ಯಾಳಿ, ಲಕ್ಕಪ್ಪ ತಹಶೀಲ್ದಾರ, ಬಸವರಾಜ ಹಿರೇಮಠ,ಯಲಪ್ಪ ನಂದಿ ನಗರಸಭೆಯ ಸದಸ್ಯರು ಸೇರಿದಂತೆ ಅನೇಕರು ಇದ್ದರು.

Related posts: