RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ಪರಿಸರ ರಕ್ಷಣೆ ಮಾಡಿದಾಗ ಮಾತ್ರ ಮಾನವನ ಬದುಕು ಹಸನಾಗುವುದು : ನಮಿತಾ ಆಜರಿ

ಗೋಕಾಕ:ಪರಿಸರ ರಕ್ಷಣೆ ಮಾಡಿದಾಗ ಮಾತ್ರ ಮಾನವನ ಬದುಕು ಹಸನಾಗುವುದು : ನಮಿತಾ ಆಜರಿ 

ಪರಿಸರ ರಕ್ಷಣೆ ಮಾಡಿದಾಗ ಮಾತ್ರ ಮಾನವನ ಬದುಕು ಹಸನಾಗುವುದು : ನಮಿತಾ ಆಜರಿ

ಗೋಕಾಕ ಜು 14 : ಪರಿಸರ ರಕ್ಷಣೆ ಮಾಡಿದಾಗ ಮಾತ್ರ ಮಾನವನ ಬದುಕು ಹಸನಾಗುವುದು, ಆದ್ದರಿಂದ ಎಲ್ಲರೂ ಪರಿಸರ ರಕ್ಷಣೆಗೆ ಕಂಕಣ ಬದ್ಧರಾಗಬೇಕೆಂದು ಇಲ್ಲಿಯ ಇನ್ನರ್‍ವ್ಹೀಲ್ ಅಧ್ಯಕ್ಷೆ ನಮಿತಾ ಆಜರಿ ಹೇಳಿದರು.
ಶನಿವಾರದಂದು ನಗರದ ನವಚೇತನ ಶಾಲೆಯ ಆವರಣದಲ್ಲಿ ಇನ್ನರ್‍ವ್ಹೀಲ್ ಸಂಸ್ಥೆಯಿಂದ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ರಕ್ಷಣೆಯಿಂದ ಪಕೃತಿ ವಿಕೋಪಗಳನ್ನು ತಡೆದು, ಕಾಲ ಕಾಲಕ್ಕೆ ಮಳೆ ಬೆಳೆಯೊಂದಿಗೆ ಉತ್ತಮವಾದ ಆರೋಗ್ಯವನ್ನು ಹೊಂದಬಹುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಇನ್ನರ್‍ವ್ಹೀಲ್ ಸಂಸ್ಥೆಯ ಕಾರ್ಯದರ್ಶಿ ಗಿರೀಜಾ ಮುನ್ನೋಳಿಮಠ, ಖಜಾಂಚಿ ವಿದ್ಯಾ ಗುಲ್ಲ, ಮುಖ್ಯೋಪಾಧ್ಯಯ ಎಸ್.ಕೆ.ಮಠದ ಸೇರಿದಂತೆ ಅನೇಕರು ಇದ್ದರು.

Related posts: