ಗೋಕಾಕ :21 ನಾಮಪತ್ರಗಳು ಕ್ರಮಬದ್ಧ : ಅರಬಾಂವಿ ಕ್ಷೇತ್ರದ ಒಂದು ನಾಮಪತ್ರ ತಿರಸ್ಕೃತ

21 ನಾಮಪತ್ರಗಳು ಕ್ರಮಬದ್ಧ : ಅರಬಾಂವಿ ಕ್ಷೇತ್ರದ ಒಂದು ನಾಮಪತ್ರ ತಿರಸ್ಕೃತ
ಗೋಕಾಕ ಏ 25 : ನಿನ್ನೆಯಷ್ಟೇ ನಾಮಪತ್ರ ಸಲ್ಲಿಸಲು ಕೊನೆಯ ದಿನ ಮುಗಿದ ಬೆನ್ನಲ್ಲೇ ಇಂದು ನಾಮಪತ್ರಗಳ ಪರಿಶೀಲನೆ ನಡೆಯಿತು
ಚುನಾವಣಾಧಿಕಾರಿಗಳ ಕಛೇರಿಯಲ್ಲಿ ಮುಂಜಾನೆಯಿಂದ ನಡೆದ ಪರಿಶೀಲನೆ ಕಾರ್ಯದಲ್ಲಿ ತೊಡಗಿದ್ದ ಚುನಾವಣಾ ಅಧಿಕಾರಿಗಳು ನಾಮಪತ್ರ ಸಲ್ಲಿದ ಎಲ್ಲಾ ಅಭ್ಯರ್ಥಿಗಳ ನಾಮಪತ್ರಗಳನ್ನು ಪರಿಶೀಲಿಸಿದರು. ಇದರಲ್ಲಿ ಅರಬಾಂವಿ ಮತಕ್ಷೇತ್ರದ 9 , ಗೋಕಾಕ ಮತಕ್ಷೇತ್ರದ 12 , ಒಟ್ಟು 21 ನಾಮಪತ್ರಗಳು ಕ್ರಮಬದ್ಧವಾಗಿವೆ
ಅರಬಾಂವಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ನಾಮಪತ್ರ ಸಲ್ಲಿಸಿದ ಪರುಶೆಟ್ಟಿ ಅವರ ನಾಮಪತ್ರ ತಿರಸ್ಕತವಾಗಿದೆ ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ . ಉಳಿದ 9 ನಾಮಪತ್ರಗಳು ಕ್ರಮಬದ್ಧವಾಗಿದ್ದು ಪುರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿ ಶರಣಬಸಪ್ಪ ಕೊಟ್ಟೆಪಗೋಳ ತಿಳಿಸಿದ್ದಾರೆ
ಗೋಕಾಕ ಮತಕ್ಷೇತ್ರದಿಂದ ಒಟ್ಟು 12 ನಾಮಪತ್ರಗಳು ಬಂದಿದ್ದು ಎಲ್ಲಾ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ತಿಳಿದು ಬಂದಿದೆ
ದಿ. 27 ನಾಮಪತ್ರ ಹಿಂಡೆಯಲು ಕೊನೆಯ ದಿನವಾಗಿದ್ದು ನಂತರ ಯಾವ್ಯಾವ ಅಭ್ಯರ್ಥಿಗಳು ಕಣದಲ್ಲಿ ಉಳಿಯಲ್ಲಿದ್ದಾರೆ ಎಂಬ ಸ್ವಷ್ಟ ಚಿತ್ರಣ ತಿಳಿಯಲಿದೆ
ಗೋಕಾಕ ಮತಕ್ಷೇತ್ರದಿಂದ ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿವರ
1) ರಮೇಶ ಜಾರಕಿಹೊಳಿ . ಕಾಂಗ್ರೇಸ 2) ಅಶೋಕ ಪೂಜಾರಿ . ಬಿಜೆಪಿ 3) ಕರೇಪ್ಪಾ ತಳವಾರ . ಜಾತ್ಯತೀತ ಜನತಾದಳ ,4) ಪರವಿನ ತಾಂಬೂಳೆ . ಎಂಇಪಿ 5) ಸತೀಶ ಅಶೋಕ ಪೂಜಾರಿ . ಪಕ್ಷೇತರ 6) ಬಾಬು ಫನಿಬಂದ . ಪಕ್ಷೇತರ 7) ಅನಿಲ ಉಪಾಧ್ಯಯ. ಪಕ್ಷೇತರ 8) ಇಮಾಮಸಾಬ ಹಿಡಕಲ್. ಪಕ್ಷೇತರ , 9) ಸುರೇಶ ಪಾಟೀಲ . ಪಕ್ಷೇತರ , 10) ಸಂತೋಷ ಪೂಜಾರಿ . ಪಕ್ಷೇತರ , 11) ಶ್ರೀನಾಥ್ ಕೌಲಗಿ , 12) ರಿಯಾಜಅಹ್ಮದ್ ಪಟ್ಟದ . ಪಕ್ಷೇತರ . ಒಟ್ಟು 12 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ತಿಳಿದು ಬಂದಿದೆ .
ಅರಬಾಂವಿ ಮತಕ್ಷೇತ್ರದಿಂದ ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿವರ
1) ಬಾಲಚಂದ್ರ ಜಾರಕಿಹೊಳಿ . ಬಿಜೆಪಿ , 2) ಅರವಿಂದ ದಳವಾಯಿ. ಕಾಂಗ್ರೇಸ , 3) ಪ್ರಕಾಶ ಸೋನವಾಲ್ಕರ . ಜಾತ್ಯಾತೀತ ಜನತಾದಳ , 4) ಆಶೋಕ ಹಣಜಿ . ಸರ್ವ ಜನತಾ ಪಕ್ಷ , 5) ಲಕ್ಷ್ಮಣ ತೋಳಿ . ಶಿವಸೇನಾ , 6) ಶಂಕರಗೌಡ ಪಡೆಸೂರ . ಎಂಇಪಿ , 7) ಚುನಪ್ಪ ಪೂಜೇರಿ . ಪಕ್ಷೇತರ , 8) ಭೀಮಪ್ಪ ಗಡಾದ . ಪಕ್ಷೇತರ , 9) ಭೀಮಪ್ಪ ನಾಯಿಕ . ಪಕ್ಷೇತರ . ಒಟ್ಟು 9 ನಾಮಪತ್ರಗಳು ಕ್ರಮಬದ್ಧವಾಗಿ ಸ್ವಿಕೃತವಾಗಿದ್ದು , ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ ಪರುಶೆಟ್ಟಿ ಅವರ ನಾಮಪತ್ರ ತಿರಸ್ಕೃತ ಗೊಂಡಿದೆ