ಗೋಕಾಕ:ಲೋಕಸಭಾ ಚುನಾವಣೆ : ಬಿಜೆಪಿ ಬೆಂಬಲಿಸಲು ಕರೆ ನೀಡಿದ ಕೈ ಮುಖಂಡ . ಬಲ ಮೂಲಗಳಿಂದ ಮಾಹಿತಿ
ಲೋಕಸಭಾ ಚುನಾವಣೆ : ಬಿಜೆಪಿ ಬೆಂಬಲಿಸಲು ಕರೆ ನೀಡಿದ ಕೈ ಮುಖಂಡ . ಬಲ ಮೂಲಗಳಿಂದ ಮಾಹಿತಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 20 :
ಲೋಕಸಭಾ ಚುನಾವಣೆ ಕಾವು ರಾಜ್ಯದಲ್ಲಿ ಜೋರಾಗಿದ್ದು, ಇದೇ ವೇಳೆ ಕಾಂಗ್ರೆಸ್ ಅತೃಪ್ತ ಮುಖಂಡ ರಮೇಶ್ ಜಾರಕಿಹೊಳಿ ತಮ್ಮ ಬೆಂಬಲಿಗರೊಂದಿಗೆ ಗೋಕಾಕನ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಕಾರ್ಯಕರ್ತರರನ್ನು ಒಬ್ಬೊಬ್ಬರಾಗಿ ಭೇಟಿ ಮಾಡಿದ ಮಾಜಿ ಸಚಿವ ಜಾರಕಿಹೊಳಿ ಬಿಜೆಪಿ ಬೆಂಬಲಿಸುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಕಾಂಗ್ರೆಸ್ ನಿಂದ ದೂರವೇ ಉಳಿದಿರುವ ಜಾರಕಿಹೊಳಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಚರ್ಚೆ ಜೋರಾಗಿದ್ದು, ಇದೇ ವೇಳೆ ಬಿಜೆಪಿ ಬೆಂಬಲದ ವಿಚಾರದಿಂದ ಇನ್ನಷ್ಟು ಸ್ಪಷ್ಟವಾದಂತಾಗಿದೆ.