ಮೂಡಲಗಿ:ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಉಚಿತ ವೈಧ್ಯಕೀಯ ಮೌಲ್ಯಾಂಕನ ಶಿಬಿರ
ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಉಚಿತ ವೈಧ್ಯಕೀಯ ಮೌಲ್ಯಾಂಕನ ಶಿಬಿರ
ಮೂಡಲಗಿ ನ 27 : ಸಮಗ್ರ ಶಿಕ್ಷಣ ಅಭಿಯಾನ ಸಮನ್ವಯ ಶಿಕ್ಷಣದಡಿ ಸನ್ 2018-19 ನೇ ಸಾಲಿನ ವೈಧ್ಯಕೀಯ ಮೌಲ್ಯಾಂಕನ ಶಿಬಿರವು ಮೂಡಲಗಿಯ ಸರಕಾರಿ ಕನ್ನಡ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ನಂ 29 ಗುರುವಾರ ರಂದು ಮುಂಜಾನೆ 09-30 ರಿಂದ ಸಾಯಂಕಾಲ 05-30 ರವರೆಗೆ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ ಮನ್ನಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಬಿರಕ್ಕೆ ಆಗಮಿಸಿದ ಮಕ್ಕಳಿಗೆ ಮತ್ತು ಪಾಲಕರಿಗೆ ಉಪಹಾರ ಮತ್ತು ಇಲಾಖೆಯ ನಿಯಮಾನುಸಾರ ಪ್ರಯಾಣ ಭತ್ಯೆಯನ್ನು ನೀಡುತ್ತಾರೆ. ನುರಿತ ತಜ್ಞ ವೈಧ್ಯರು ಶಿಬಿರದಲ್ಲಿ ಭಾಗವಹಿಸಿ ವಿಶೇಷ ಚೇತನ ಮಕ್ಕಳಿಗೆ ಉಚಿತ ತಪಾಸಣೆ ಮಾಡಿ ಸೂಕ್ತ ಸಾಧನ ಸಲಕರಣೆಗಳಿಗೆ ಶಿಪಾರಸ್ಸು ಮಾಡಲಿದ್ದಾರೆ. ಸಾಧನ-ಸಲಕರಣೆಗಳು ಹಾಗೂ ಚಿಕಿತ್ಸೆಯನ್ನು ಇಲಾಖೆವತಿಯಿಂದ ಉಚಿತವಾಗಿ ನೀಡಲಾಗುವುದು. ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿಯ ಎಲ್ಲ ವಿಶೇಷ ಚೇತನ ಮಕ್ಕಳು ಹಾಗೂ ಗೃಹಾಧಾರಿತ ಶಿಕ್ಷಣ (ಎಚ್.ಬಿ.ಇ) ಪಡೆಯುತ್ತಿರುವ ವಿಶೇಷಚೇತನ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಬಿ.ಎಚ್ ಮೋರೆ ಮೊ ನಂ 9480695061, ಬಿ.ಐ.ಆರ್.ಟಿಗಳಾದ ವಾಯ್.ಬಿ ಪಾಟೀಲ್ ಮೊ ನಂ 9449886569, ವಾಯ್ ಆರ್ ಮುಕ್ಕನ್ನವರ ಮೊ ನಂ 9902897626 ಸಂಪರ್ಕಿಸಲು ತಿಳಿಸಿದ್ದಾರೆ.