RNI NO. KARKAN/2006/27779|Thursday, July 3, 2025
You are here: Home » breaking news » ಗೋಕಾಕ:ಕೆ.ಎಲ್.ಇ. ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ 82 ಜನ ವಿದ್ಯಾರ್ಥಿಗಳ ಆಯ್ಕೆ

ಗೋಕಾಕ:ಕೆ.ಎಲ್.ಇ. ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ 82 ಜನ ವಿದ್ಯಾರ್ಥಿಗಳ ಆಯ್ಕೆ 

ಕೆ.ಎಲ್.ಇ. ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ 82 ಜನ ವಿದ್ಯಾರ್ಥಿಗಳ ಆಯ್ಕೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 15 :
ಇಲ್ಲಿಯ ಕೆ.ಎಲ್.ಇ. ಸಂಸ್ಥೆಯ ಐ.ಟಿ.ಐ. ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಇನ್‍ಕ್ಯಾಪ್ ಸಿ.ಎಂ.ಎಸ್. ಪ್ರಾ.ಲಿ. ಕಂಪನಿಯ ಕ್ಯಾಂಪಸ್ ಸಂದರ್ಶನವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಲು ಸಂಸ್ಥೆಯಲ್ಲಿ ಪ್ರತಿವರ್ಷ ಕ್ಯಾಂಪಸ್ ಸಂದರ್ಶನಗಳನ್ನು ಹಮ್ಮಿಕೊಳ್ಳಲಾಗುತ್ತಿದು,ಇದರ ಸದುಪಯೋಗ ಪಡೆದುಕೊಂಡ ನಮ್ಮ ಸಂಸ್ಥೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ಉತ್ತಮ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕ್ಯಾಂಪಸ್ ಸಂದರ್ಶನದಲ್ಲಿ 100 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ 82 ಜನ ವಿದ್ಯಾರ್ಥಿಗಳು ತುಮಕೂರ ಇನ್‍ಕ್ಯಾಪ್ ಸಿ.ಎಂ.ಎಸ್. ಪ್ರಾ.ಲಿ. ಕಂಪನಿಗೆ ಆಯ್ಕೆಯಾದರು.
ಈ ಸಂದರ್ಭದಲ್ಲಿ ಕಂಪನಿಯ ಎಚ್.ಆರ್. ಗಳಾದ ಚಿಕ್ಕಸ್ವಾಮಿ, ಮನು ಕೆ.ಜಿ, ಉಪನ್ಯಾಸಕರಾದ ಕೆ.ವ್ಹಿ ಕುಲಕರ್ಣಿ, ವಿ.ಐ ವಾಲಿ ಉಪಸ್ಥಿತರಿದ್ದರು

Related posts: