RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವಂತರಾಗಿ : ಅಡಿವೇಶ ಗವಿಮಠ

ಗೋಕಾಕ:ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವಂತರಾಗಿ : ಅಡಿವೇಶ ಗವಿಮಠ 

ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವಂತರಾಗಿ : ಅಡಿವೇಶ ಗವಿಮಠ

ಗೋಕಾಕ ಅ 16 : ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವಂತರಾಗಿ ಸಮಾಜ ಗೌರವಿಸುವಂತಹ ವ್ಯಕ್ತಿಗಳಾಗಿ ಎಂದು ಇಲ್ಲಿನ ಎಸ್.ಎಸ್.ಬಿ.ಸಿ ಎ ಕಾಲೇಜಿನ ಆಡಳಿತ ಅಧಿಕಾರಿ ಅಡಿವೇಶ ಗವಿಮಠ ಹೇಳಿದರು.

ಶುಕ್ರವಾರದಂದು ನಗರದ ಶೂನ್ಯ ಸಂಪಾದನ ಮಠದ ಶ್ರೀ ಸಿದ್ದಲಿಂಗೇಶ್ವರ ಬಿ.ಸಿ.ಎ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಂದೆ,ತಾಯಿಗಳ ನಂತರದ ಸ್ಥಾನ ಶಿಕ್ಷಕರದಾಗಿದ್ದು, ಅವರು ನಿಮಗೆ ಒಳ್ಳೆಯ ಮಾರ್ಗದರ್ಶನವನ್ನು ಮಾಡಿರುತ್ತಾರೆ.ಅವರ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾದರೆ ಯಶಸ್ಸು ನಿಶ್ಚಿತ ಇಂದು ದೇಶಕ್ಕೆ ಉದ್ಯೋಗ ಸೃಷ್ಟಿ ಮಾಡುವವರ ಅವಶ್ಯಕತೆ ಇದೆ. ತಾವು ಕಲಿತ ಕೌಶಲ್ಯಗಳಿಂದ ಊದ್ಯೋಗಪತಿಗಳಾಗಿ ಉದ್ಯೋಗ ನೀಡಿರಿ ಯುವ ಶಕ್ತಿಯಿಂದ ದೇಶದ ಅಭಿವೃದ್ಧಿ ಸಾಧ್ಯ. ಅಂತಹ ಶಕ್ತಿವಂತರಾಗಿ ಬಲಿಷ್ಠ ಭಾರತ ನಿರ್ಮಿಸುವಂತೆ ಕರೆ ನೀಡಿದರು.

ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕ ವಿವೆಕ ಜತ್ತಿ, ಉಪನ್ಯಿಸಕಿ ಶ್ವೇತಾ, ವಿದ್ಯಾರ್ಥಿ ಪ್ರತಿನಿಧಿ ರಾಹುಲ್ ಗಸ್ತಿ ಇದ್ದರು.

Related posts: