RNI NO. KARKAN/2006/27779|Friday, August 7, 2026
You are here: Home » breaking news » ಗೋಕಾಕ:ಎಸ್.ಐ.ಆರ್. ಪ್ರಕ್ರಿಯೆಯಿಂದ ಲಕ್ಷಾಂತರ ಜೀವಂತ ಮತದಾರರ ಮತದಾನದ ಹಕ್ಕು ಅಪಾಯಕ್ಕೆ ಸಿಲುಕಿದೆ : ಐನಾ ಶೇಖ

ಗೋಕಾಕ:ಎಸ್.ಐ.ಆರ್. ಪ್ರಕ್ರಿಯೆಯಿಂದ ಲಕ್ಷಾಂತರ ಜೀವಂತ ಮತದಾರರ ಮತದಾನದ ಹಕ್ಕು ಅಪಾಯಕ್ಕೆ ಸಿಲುಕಿದೆ : ಐನಾ ಶೇಖ 

ಎಸ್.ಐ.ಆರ್. ಪ್ರಕ್ರಿಯೆಯಿಂದ ಲಕ್ಷಾಂತರ ಜೀವಂತ ಮತದಾರರ ಮತದಾನದ ಹಕ್ಕು ಅಪಾಯಕ್ಕೆ ಸಿಲುಕಿದೆ : ಐನಾ ಶೇಖ

ಗೋಕಾಕ ಆ 7 : ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್.ಐ.ಆರ್. ಪ್ರಕ್ರಿಯೆಯಿಂದ ಲಕ್ಷಾಂತರ ಜೀವಂತ ಮತದಾರರ ಮತದಾನದ ಹಕ್ಕು ಅಪಾಯಕ್ಕೆ ಸಿಲುಕಿದೆ ಎಂದು ಇಲ್ಲಿನ ನಾಗರಿಕ ಮತಕಾವಲು ಸಮಿತಿಯ ತಾಲೂಕು ಸಂಚಾಲಕಿ ಐನಾ ಶೇಖ ಹೇಳಿದರು.

ಶುಕ್ರವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಚುನಾವಣಾ ಆಯೋಗವೆ ಪ್ರಕಟಿಸಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ 1.10 ಕೋಟಿ ಮತದಾರರನ್ನು ಡಿಲೀಷನ್ ಪಟ್ಟಿಗೆ ಸೇರಿಸಲಾಗಿದೆ. ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಜೀವಂತವಾಗಿರುವ ಮತದಾರರನ್ನು ಪಟ್ಟಿಯಿಂದ ತಗೆದುಹಾಕುವುದು ಪ್ರಜಾಪ್ರಭುತ್ವದ ಮೂಲತತ್ವಗಳಿಗೆ ವಿರುದ್ಧವಾಗಿದೆ. ಇದನ್ನು ಸರಿಪಡಿಸಲು ಈ ಪ್ರಕ್ರಿಯೆಯನ್ನು ಒಂದು ತಿಂಗಳವರೆಗೆ ವಿಸ್ತರಿಸಬೇಕು. ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಪ್ರತಿ ಬೂತಮಟ್ಟದಲ್ಲಿ ಸಾರ್ವಜನಿಕ ಪರಿಶೀಲಿನಾ ಸಭೆ ನಡೆಸಬೇಕು. ಮತದಾರರ ಹಕ್ಕು ಸಂವಿದನಾತ್ಮಕ ಹಕ್ಕಾಗಿರುವುದು ಅದನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಈ ವಿಷಯವನ್ನು ಚುನಾವಣಾ ಆಯೋಗವು ಗಂಭೀರವಾಗಿ ಪರಿಗಣಿಸಿ ಅಗತ್ಯ ತಿದ್ದುಪಡಿಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದಲಿ ಕಾನೂನು ಬದ್ಧ ಹಾಗೂ ಪ್ರಜಾಸತ್ತಾತ್ಮಕ ಹೋರಾಟವನ್ನು ತೀವ್ರ ಗೋಳಿಲಾಗುವುದೆಂದು ಹೇಳಿದರು.

ಈ ಸಂದರ್ಭದಲ್ಲಿ ಶಬ್ಬೀರ ಮುಜಾವರ, ಸಂಗೀತಾ ಕಾಂಬಳೆ, ಮಾಶೂಕಾ ಮುಲ್ಲಾ, ಮೈನೊದ್ದೀನ ಅಂಡಗಿ, ಸುಭಾನಿ ಮುಜಾವರ, ಮಾದವಿ ಪಾಟೀಲ್, ಈಶ್ವರ ಬಾಗೋಜಿ ಉಪಸ್ಥಿತರಿದ್ದರು.

Related posts:

ಗೋಕಾಕ:ದಿ.17 ರಂದು ನಡೆಯಬೇಕಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮಾರಕ ಸೈನಿಕ ಶಾಲೆ ಶಂಕುಸ್ಥಾಪನೆ ಮುಂದೂಡಿಕೆ

ಮೂಡಲಗಿ:ಶಾಸ್ತ್ರೀಯ ಭಾಷೆಯಾದ ಕನ್ನಡ ನಾಡಿನ ಹಿರಿಮೆ ವಿಶ್ವವ್ಯಾಪಿಯಾಗಿ ಪಸರಿಸಿದೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕ…

ಗೋಕಾಕ:ರೋಟರಿ ಸಂಸ್ಥೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸಹಕಾರ ನೀಡುತ್ತಿದೆ…