RNI NO. KARKAN/2006/27779|Friday, May 1, 2026
You are here: Home » breaking news » ಗೋಕಾಕ:ರಂಗಭೂಮಿ ಕಲಾವಿದರ ಸಮಾಜಕ್ಕೆ ಸಲ್ಲಿಸಿದ ಸೇವೆ ಬಹಳ ಮಹತ್ತರವಾಗಿದೆ : ತಹಶೀಲ್ದಾರ ಡಾ. ಭಸ್ಮೆ

ಗೋಕಾಕ:ರಂಗಭೂಮಿ ಕಲಾವಿದರ ಸಮಾಜಕ್ಕೆ ಸಲ್ಲಿಸಿದ ಸೇವೆ ಬಹಳ ಮಹತ್ತರವಾಗಿದೆ : ತಹಶೀಲ್ದಾರ ಡಾ. ಭಸ್ಮೆ 

ರಂಗಭೂಮಿ ಕಲಾವಿದರ ಸಮಾಜಕ್ಕೆ ಸಲ್ಲಿಸಿದ ಸೇವೆ ಬಹಳ ಮಹತ್ತರವಾಗಿದೆ : ತಹಶೀಲ್ದಾರ ಡಾ. ಭಸ್ಮೆ
ಗೋಕಾಕ ಮಾ 7 : ಕಲಾವಿದರು ರಂಗಭೂಮಿ ಮುಖಾಂತರ ಸಮಾಜಕ್ಕೆ ಸಲ್ಲಿಸಿದ ಸೇವೆ ಬಹಳ ಮಹತ್ತರವಾಗಿದ್ದು, ಅಂತಹವರನ್ನು ಗುರುತಿಸಿ,ಗೌರವಿಸುತ್ತಿರುವುದು ಶ್ಲಾಘನೀಯ ಎಂದು ತಹಶೀಲ್ದಾರ ಡಾ.ಮೋಹನ ಭಸ್ಮೆ ಹೇಳಿದರು.
ಶನಿವಾರದಂದು ನಗರದ ರೋಟರಿ ರಕ್ತ ಭಂಡಾರದ ಸಭಾಂಗಣದಲ್ಲಿ ಇಲ್ಲಿನ ಆಶಾಕಿರಣ ಕಲಾಟ್ರಸ್ಟ್ ನವರು ಹಮ್ಮಿಕೊಂಡ ರಂಗ ಸ್ಮರಣೋತ್ಸವ 12ನೇಪ್ರಶಸ್ತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೊಬೈಲ್ ಯುಗದಲ್ಲಿ ನಾವು ಏನು ಮಾಡುತ್ತಿದ್ದೇವೆ ಎಂಬುದು ತಿಳಿಯದಾಗಿದೆ. ಭಾರತೀಯ ಸಂಸ್ಕೃತಿಯು ಮಾನವೀಯ ಧರ್ಮವನ್ನು ಹೇಳಿಕೊಟ್ಟಿದೆ‌.ಮಾನವ ಮನಸ್ಸು ಮಾಡಿದರೆ ಏನಾದರೂ ಸಾಧಿಸಬಹುದು ಎಂದು ಕಿರುತೆರೆ ನಟಿ ಮಾಲತಿಶ್ರೀ ಮೈಸೂರು ಅವರು ಕಳೆದ 12 ವರ್ಷಗಳಿಂದ ತೋರಿಸಿಕೊಟ್ಟಿದ್ದು, ಕಳೆದ ದಶಕದಿಂದ ರಂಗಭೂಮಿ ಕಲಾವಿದರನ್ನು ಗುರುತಿಸಿ, ಗೌರವಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ. ಇತ್ತಿಚಿನ ದಿನಗಳಲ್ಲಿ ಸಮಾಜ ನಿಜವಾದ ರಂಗಭೂಮಿ ಕಲಾವಿದರನ್ನು ಗುರುತಿಸುತ್ತಿಲ್ಲ. ಮುಖ್ಯವಾಹಿನಿಯಲ್ಲಿ ರಂಗಭೂಮಿ ಕಲಾವಿದರನ್ನು ಗುರುತಿಸುವ ಕಾರ್ಯವಾಗಬೇಕು.ಬೇರೆಯವರನ್ನು ಪ್ರೋತ್ಸಾಹಿಸುವುದು ನಮ್ಮ ಭಾರತ ದೇಶದ ಸಂಪ್ರದಾಯವಾಗಿದ್ದು, ಅದನ್ನು ಪ್ರತಿಯೊಬ್ಬರು ಪಾಲಿಸಿಕೊಂಡು ಬಂದು ರಂಗಭೂಮಿ ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸಬೇಕು ಎಂದು ಡಾ.ಮೋಹನ ಭಸ್ಮೆ ಹೇಳಿದರು.

ಇದೇ ಸಂದರ್ಭದಲ್ಲಿ ರಂಗಭೂಮಿ ಭೀಷ್ಮ ದಿವಂಗತ ಶ್ರೀ ಬಸವಣ್ಣೆಪ್ಪ ಹೊಸಮನಿ ರಂಗ ಪ್ರಶಸ್ತಿಯನ್ನು ಗೋಕಾಕಿನ ರಂಗಭೂಮಿ ಹಿರಿಯ ಕಲಾವಿದ ಜಯರಾಜ ಬಸವರಾಜ ಹೊಸಮನಿ ಹಾಗೂ ರಂಗಭೂಮಿ ದ್ರೋಣ ದಿವಂಗತ ಬಿ.ಆರ್ .ಅರಿಷಿಣಗೋಡಿ ರಂಗ ಪ್ರಶಸ್ತಿಯನ್ನು ಬಳ್ಳಾರಿ ಜಿಲ್ಲೆಯ ಕುಡುದರಹಾಳು ಗ್ರಾಮದ ಡಾ. ಶಿವಕುಮಾರ ತಾತನವರಿಗೆ ನೀಡಿ ಗೌರವಿಸಲಾಯಿತು

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಘೋಡಗೇರಿ ಶಿವಾನಂದ ಮಠದ ಪರಮ ಪೂಜ್ಯ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶೋಕ ಪೂಜಾರಿ ವಹಿಸಿದ್ದರು.

ವೇದಿಕೆಯಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಹಾಂತೇಶ ತಾವಂಶಿ, ಸಿರಿಗನ್ನಡಂ ಮಹಿಳಾ ವೇದಿಕೆಯ ರಾಜ್ಯಾಧ್ಯಕ್ಷೆ ರಜನಿ ಜರಗ್ಯಾಳ, ಕಿರುತರೆ ಕಲಾವಿದರುಗಳಾದ ಆನಂದ ,ಶ್ರೀಮತಿ ಸ್ವಾತಿ, ಮಲ್ಲಿಕಾರ್ಜುನ ಕಲ್ಲೋಳ್ಳಿ, ವೆಂಕಟೇಶ್ ಚೋಪದಾರ,ರವಿಅರಿಷಿಣಗೋಡಿ, ಕಲಾಟ್ರಸ್ಟ್ ಅಧ್ಯಕ್ಷೆ ಮಾಲತಿಶ್ರೀ ಇದ್ದರು .

Related posts: