RNI NO. KARKAN/2006/27779|Saturday, August 2, 2025
You are here: Home » breaking news » ಬೆಳಗಾವಿ:ಸಮಾಜಿಕ ಜಾಲತಾಣದಲ್ಲಿ ಸತೀಶ ಜಾರಕಿಹೊಳಿ ಅವರಿಗೆ ಟಾಂಗ್ ನೀಡಿದ ಲಕ್ಷ್ಮೀ ಹೆಬ್ಬಾಳಕರ ಅಭಿಮಾನಿ ಬಳಗ

ಬೆಳಗಾವಿ:ಸಮಾಜಿಕ ಜಾಲತಾಣದಲ್ಲಿ ಸತೀಶ ಜಾರಕಿಹೊಳಿ ಅವರಿಗೆ ಟಾಂಗ್ ನೀಡಿದ ಲಕ್ಷ್ಮೀ ಹೆಬ್ಬಾಳಕರ ಅಭಿಮಾನಿ ಬಳಗ 

ಸಮಾಜಿಕ ಜಾಲತಾಣದಲ್ಲಿ ಸತೀಶ ಜಾರಕಿಹೊಳಿ ಅವರಿಗೆ ಟಾಂಗ್ ನೀಡಿದ ಲಕ್ಷ್ಮೀ ಹೆಬ್ಬಾಳಕರ ಅಭಿಮಾನಿ ಬಳಗ
ಬೆಳಗಾವಿ ಅ 29: ಬೆಳಗಾವಿಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಎಐಸಿಸಿ ಕಾರ್ಯದರ್ಶಿ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಪರೋಕ್ಷವಾಗಿ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಟಾಂಗ್ ನೀಡಿದ್ದ ಬೆನ್ನಲ್ಲೇ ಈಗ ಲಕ್ಷ್ಮೀ ಹೆಬ್ಬಾಳಕರ ಅವರ ಅಭಿಮಾನಿ ಬಳಗದವರು ಸಮಾಜಿಕ ಜಾಲತಾಣವಾದ ಫೇಸ್ಬುಕ್ನಲ್ಲಿ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಅವರಿಗೆ ಟಾಂಗ್ ನೀಡಿದ್ದಾರೆ 
ಮೊನ್ನೆ ಸತೀಶ್‌ ಜಾರಕಿಹೊಳಿ ಅಭಿಮಾನಿಗಳು ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಲಕ್ಷ್ಮಿ ಹೆಬ್ಬಾಳ್‌ಕರ್‌ ವಿರುದ್ಧ ಪರೋಕ್ಷ ಕಿಡಿಕಾರಿದ್ದ ಸತೀಶ್ ಜಾರಕಿಹೊಳಿ, “ಸೀರೆ ಹಂಚುವುದು, ಸೇರಿದಂತೆ ದೆಹಲಿಯಲ್ಲಿ ಒಬ್ಬ ನಾಯಕ, ಬೆಂಗಳೂರಿನಲ್ಲಿ ಒಬ್ಬ ನಾಯಕ ಹಾಗೂ ಬೆಳಗಾವಿಯಲ್ಲಿ ಒಬ್ಬ ನಾಯಕನನ್ನ ಇಟ್ಟು ರಾಜಕಾರಣ ಮಾಡಿದಂತೆ ಇನ್ನು ಮುಂದೆ ಆಗುವುದಿಲ್ಲ” ಎಂದು  ಹೆಬ್ಬಾಳ್‌ಕರ್‌ಗೆ ಟಾಂಗ್ ನೀಡಿದ್ದರು
ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಅಭಿಮಾನಿಗಳ ಮಧ್ಯೆ ಪರಸ್ಪರ ರಾಜಕೀಯ ಕಿತ್ತಾಟಕ್ಕೆ ವೇದಿಕೆ ಕಲ್ಪಿಸಿದ ಸತೀಶ ಜಾರಕಿಹೊಳಿ ಹೇಳಿಕೆಗೆ ಹೆಬ್ಬಾಳ್ಕರ್ ಅಭಿಮಾನಿಗಳು ಖಾರವಾಗಿ ಪ್ರತ್ಯುತ್ತರ ನೀಡಿದ್ದಾರೆ. 

 

“ಮೇಡಂ ಅವರೇ ನಿಮ್ಮ ವಿರುದ್ಧ ಮಾತನಾಡಿದ ಕೆಲವು ರಾಜಕಾರಣಿಗಳು ನಿಮ್ಮ ರಾಜಕೀಯ ವರ್ಚಸ್ಸು ನೋಡಿ ಹತಾಶರಾಗಿದ್ದಾರೆ. ಅವರು ಹೇಳಿದ ಮಾತುಗಳಿಗೆ ಕಿವಿಗೊಡಬೇಡಿ ಏಕೆಂದರೆ ಅವರು ದೊಡ್ಡವರು. ಜಿಲ್ಲೆಯ ಜನತೆಗೆ ಒಂದು ಕಾಲದಲ್ಲಿ ಅಲ್ಕೋಹಾಲು ಕುಡಿಸಿ ಈಗ ನಾಗರ ಪಂಚಮಿಗೆ ಇವರೇ ಹಾಲು ಕುಡಿಸುವ ವಿಷಯ ಪ್ರಸ್ತಾಪಿಸಿ, ಬುದ್ಧ ಬಸವನ ಪಾಠ ಹೇಳುತ್ತಿದ್ದಾರೆ. ನೀವು ಹೆದರಬೇಡಿ  ಯಾರು ಬೆವರು ಸುರಿಸಿ ದುಡಿದು ಹಣ ಗಳಿಸಿದ್ದಾರೆ ಅನ್ನೋದು ಜಿಲ್ಲೆಯ ಜನತೆಗೆ ಗೊತ್ತಿದೆ” ಎಂದು ನೇರವಾಗಿ  ಟಾಂಗ್ ನೀಡಿದ್ದಾರೆ. ಈಗ ಇದು ಸಾಮಾಜಿಕ ಜಾಲತಾಣದಲ್ಲಿ  ವೈರಲ್  ಆಗಿದೆ

Related posts: