RNI NO. KARKAN/2006/27779|Thursday, July 3, 2025
You are here: Home » breaking news » ಗೋಕಾಕ:ಮೀನು ಹಿಡಿಯಲು ಹೋಗಿದ್ದ ಸಂದರ್ಭದಲ್ಲಿ ಆಯತಪ್ಪಿ ನದಿಗೆ ಬಿದ್ದಿದ್ದ ಯುವಕನ ಮೃತದೇಹ ಪತ್ತೆ

ಗೋಕಾಕ:ಮೀನು ಹಿಡಿಯಲು ಹೋಗಿದ್ದ ಸಂದರ್ಭದಲ್ಲಿ ಆಯತಪ್ಪಿ ನದಿಗೆ ಬಿದ್ದಿದ್ದ ಯುವಕನ ಮೃತದೇಹ ಪತ್ತೆ 

ಮೀನು ಹಿಡಿಯಲು ಹೋಗಿದ್ದ ಸಂದರ್ಭದಲ್ಲಿ ಆಯತಪ್ಪಿ ನದಿಗೆ ಬಿದ್ದಿದ್ದ ಯುವಕನ ಮೃತದೇಹ ಪತ್ತೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 28 :
ಇಲ್ಲಿನ ಸಮಿಪದ ಶಿಂಗಳಾಪೂರ ಸೇತುವೆ ಬಳಿ ಮೀನು ಹಿಡಿಯಲು ಹೋಗಿ ಆಯತಪ್ಪಿ ಘಟಪ್ರಭಾ ನದಿಯಲ್ಲಿ ಬಿದ್ದಿದ್ದ ಯುವಕ ಪರಶುರಾಮ ಜಾಲಗಾರ (26) ಮೃತದೇಹ ಗುರುವಾರ ಮಧ್ಯಾಹ್ನ ಪತ್ತೆಯಾಗಿದೆ.

ನಗರದ ಶಿಂಗಳಾಪೂರ ಸೇತುವೆ ಬಳಿ ನಿನ್ನೆ ಮೀನು ಹಿಡಿಯಲು ನದಿ ದಡದ ಸೇತುವೆ ಮೇಲೆ ಕುಳಿತಾಗ ಆಯ ತಪ್ಪಿ ನೀರು ಪಾಲಾಗಿದ್ದ ಪರುಶರಾಮ ಜಾಲಗಾರ ಯುವಕನ ಮೃತ ದೇಹ ಪತ್ತೆ ಮಾಡುವಲ್ಲಿ ಅಗ್ನಿ ಶಾಮಕ ದಳ ಯಶಸ್ವಿಯಾಗಿದೆ. ಕಾರ್ಯಚರಣೆಗೆ ಬೆಳಗಾವಿಯಿಂದಲೂ ಅಗ್ನಿ ಶಾಮಕ ದಳ ಮತ್ತು ಬೋಟ್ ತರಿಸುವ ಮೂಲಕ ಕಾರ್ಯಾಚರಣೆ ನಡೆಸಿ ಮೃತ ದೇಹವನ್ನು ಪತ್ತೆ ಹಚ್ಚಲಾಗಿದೆ.
ಈ ಕುರಿತು ಗೋಕಾಕ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts: