RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ: ಎಸ್ಎಸ್ಎಲ್.ಸಿ ಫಲಿತಾಂಶ ಪ್ರಕಟ : ಗೋಕಾಕ ವಲಯ ರಾಜ್ಯಕ್ಕೆ ಎರಡನೇ ಸ್ಥಾನ

ಗೋಕಾಕ: ಎಸ್ಎಸ್ಎಲ್.ಸಿ ಫಲಿತಾಂಶ ಪ್ರಕಟ : ಗೋಕಾಕ ವಲಯ ರಾಜ್ಯಕ್ಕೆ ಎರಡನೇ ಸ್ಥಾನ 

ಎಸ್ಎಸ್ಎಲ್.ಸಿ ಫಲಿತಾಂಶ ಪ್ರಕಟ : ಗೋಕಾಕ ವಲಯ ರಾಜ್ಯಕ್ಕೆ ಎರಡನೇ ಸ್ಥಾನ

ಗೋಕಾಕ ಮೇ 12: ಎಸ್ಎಸ್ಎಲ್.ಸಿ ಪರೀಕ್ಷೆ ಫಲಿತಾಂಶ ಇಂದು ರಾಜ್ಯದ್ಯಂತ ಬಿಡುಗಡೆಗೊಂಡಿದ್ದು ಗೋಕಾಕ ವಲಯ ಶೇಕಡಾ 92% ಪ್ರತಿಷಿತ ಪಡೆಯುವ ಮುಖಾಂತರ ರಾಜ್ಯಕ್ಕೆ ಎರಡನೇಯ ಸ್ಥಾನ ಪಡೆದಿದೆ ಎಂದು ಗೋಕಾಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಮಾಹಿತಿ ನೀಡಿದರು .

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು ಎಸ್ಎಸ್ಎಲಸಿ ಪರೀಕ್ಷೆಯ ಫಲಿತಾಂಶ ಉನ್ನತಮಟ್ಟಕೇರಿಸುವ ಸಲುವಾಗಿ ಸಚಿವ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಜೂನ ತಿಂಗಳಿಂದಲೇ ಮಕ್ಕಳಲ್ಲಿ ಶೈಕ್ಷಣಿಕವಾಗಿ ಆಸಕ್ತಿ ತುಂಬಲು ಗುರುಜೀ ಬಂದರು ಗುರುವಾರ , ಮೀಸಕಾಲ ಮಾಡಿ ಉತ್ತರ ಪಡೆಯಿರಿ ,ನಕ್ಷಾ ಸಪ್ತಾಹ, ಪತ್ರ ಚಳುವಳಿ ರಾತ್ರಿ ವಿಶೇಷ ತರಗತಿ, ಸೇರಿದಂತೆ ಇನ್ನಿತರ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು .ವಲಯದ ಎಲ್ಲ ಶಿಕ್ಷಕರ ಅವಿರತ ಪ್ರಯತ್ನದಿಂದ ಈ ಸಾಧನೆ ಸಾಧ್ಯವಾಗಿದೆ ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶ ಉನ್ನತ ಮಟ್ಟಕೆರಲು ಶ್ರಮಿಸಿದ ವಲಯದ ಎಲ್ಲ ಶಿಕ್ಷಕ ಬಳಗ ಅಭಿನಂದಾರ್ಹರು ಎಂದು ಬಿಇಓ ಬಳಗಾರ ಎಲ್ಲ ಗುರು ಬಳಗದ ಶ್ರಮವನ್ನು ಹೋಗಳಿದರು.
ಇದೇ ಸಂರ್ಧಭದಲ್ಲಿ ಗೋಕಾಕ ಶೈಕ್ಷಣಿಕ ವಲಯದ ವತಿಯಿಂದ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಸತ್ಕಾರಿಸಲಾಯಿತು.

ಕಳೆದ ಮಾರ್ಚ ತಿಂಗಳಲ್ಲಿ ಜರುಗಿದ ಪರೀಕ್ಷೆಯಲ್ಲಿ ಗೋಕಾಕ ವಲಯದ 17 ಪರೀಕ್ಷಾ ಕೇಂದ್ರಗಳಲ್ಲಿ ಸುಮಾರು 4190 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದರು .

ರಮೇಶ ಜಾರಕಿಹೊಳಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ::

ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಸತತ ಪರಿಶ್ರಮದ ಫಲವಾಗಿ ಇಂದು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಗೋಕಾಕ ವಲಯ ರಾಜ್ಯಕ್ಕೆ ಎರಡನೇ ಸ್ಥಾನ ಪಡೆಯಲು ಸಾಧ್ಯವಾಗಿದೆ. ಇದೆ ರೀತಿ ಮುಂದೆಯು ವಿದ್ಯಾರ್ಥಿಗಳು ಉನ್ನತ ವ್ಯಾಸಂಗದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಿ ಗೋಕಾಕಿನ ಹೆಸರನ್ನು ಉನ್ನತಮಟ್ಟಕೆ ಓಯ್ಯುವಂತಾಗಲಿ

Related posts: