ಗೋಕಾಕ:ಸಮಾಜದ ಯುವಕರು, ಒಳ್ಳೆಯ ಆಚಾರ ವಿಚಾರಗಳನ್ನು ಹೊಂದಿ : ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ
ಸಮಾಜದ ಯುವಕರು, ಒಳ್ಳೆಯ ಆಚಾರ ವಿಚಾರಗಳನ್ನು ಹೊಂದಿ : ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 2 :
ನೂತನ ವಿಧಾನಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಕಛೇರಿಗೆ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಭಾನುವಾರದಂದು ಭೇಟಿ ನೀಡಿ, ಸತ್ಕರಿಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು
ಸಮಾಜ ಮತ್ತು ಪೀಠದ ಬೆಳವಣಿಗೆಗೆ ಸಮಾಜದ ಉದಾರ ದಾನಿಗಳು ಶ್ರಮಿಸಬೇಕು. ಸಮಾಜದ ಯುವಕರು, ಒಳ್ಳೆಯ ಆಚಾರ ವಿಚಾರಗಳನ್ನು ಹೊಂದಿ ಸಮಾಜ ಸಂಘಟನೆಯತ್ತ ಚಿತ್ತ ನೆಡಬೇಕು. ಇದರೊಟ್ಟಿಗೆ ಸಮಾಜ ಬಾಂಧವರು ಉತ್ತಮ ಸಂಸ್ಕಾರ ಹಾಗೂ ಶಿಕ್ಷಣವಂತರಾಗಬೇಕು. ಅಂದಾಗ ಸಮಾಜ ಉದ್ಧಾರವಾಗುವುದು ಎಂದರು.ಸಮಾಜ ಸಂಘಟಿಸಲು ಸಮಾಜದವರು ಆರ್ಥಿಕ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಅಭಿವೃದ್ಧಿಯಾಗಬೇಕು. ಜಾರಕಿಹೊಳಿ ಕುಟುಂಬ ರಾಜ್ಯ ಅಷ್ಟೇ ಅಲ್ಲ ಇಡೀ ದೇಶ ತಿರುಗಿ ನೋಡುವ ಹಾಗೆ ರಾಜಕೀಯದಲ್ಲಿ ಬೆಳೆದು ನಿಂತಿದೆ ಜಾರಕಿಹೊಳಿ ಸಹೋದರರಿಗೆ ಭಗವಂತ ಇನ್ನಷ್ಟು ಮತ್ತಷ್ಟು ಶಕ್ತಿ ನೀಡಲ್ಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಭೀಮಗೌಡ ಪೋಲಿಸಗೌಡರ, ಸದಾ ಕಲಾಲ, ಗುರು ಪೂಜೇರಿ, ಸಂತೋಷ ಖಂಡ್ರಿ, ಲಕ್ಷ್ಮಣ ತೊಟಗಿ ಸೇರಿದಂತೆ ಅನೇಕರು ಇದ್ದರು.