ಗೋಕಾಕ:ಕ್ರಿಕೆಟ್ ಬೆಟ್ಟಿಂಗ್ : ಬುಕ್ಕಿಗಳಿಗೆ ಠಾಣೆಗೆ ಕರೆಯಿಸಿ ಡಿ.ವಾಯ್.ಎಸ್.ಪಿ ಜಾವೇದ ಕ್ಲಾಸ್
ಕ್ರಿಕೆಟ್ ಬೆಟ್ಟಿಂಗ್ : ಬುಕ್ಕಿಗಳಿಗೆ ಠಾಣೆಗೆ ಕರೆಯಿಸಿ ಡಿ.ವಾಯ್.ಎಸ್.ಪಿ ಜಾವೇದ ಕ್ಲಾಸ್
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 22 :
ಗೋಕಾಕ ನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕ್ರಿಕೆಟ್ ಬೆಟ್ಟಿಂಗನಲ್ಲಿ ತೊಡಗಿರುವ ಬುಕ್ಕಿಗಳಿಗೆ ಗೋಕಾಕ ಡಿ.ವಾಯ್.ಎಸ್.ಪಿ ಜಾವೇದ ಇನಾಂದಾರ ಅವರು ಠಾಣೆಗೆ ಕರೆಯಸಿ ಖಡಕ್ ವಾರ್ನಿಂಗ ಮಾಡಿದ್ದಾರೆಂದು ತಿಳಿದು ಬಂದಿದೆ
ಕಳೆದ ಹಲವು ವರ್ಷಗಳಿಂದ ಗೋಕಾಕ ನಗರದಲ್ಲಿ ಕ್ರಿಕೆಟ್ ಮಾಫಿಯಾ ಜೋರಾಗಿ ನಡೆದಿದ್ದು , ಕಳೆದ ಕೆಲ ದಿನಗಳ ಹಿಂದೆಯಷ್ಟೇ ದಿನಪತ್ರಿಕೆಯೊಂದರಲ್ಲಿ ಗೋಕಾಕ ಬೆಟ್ಟಿಂಗ್ ಮಾಫಿಯಾ ಕುರಿತು ವರದಿಯೊಂದು ಪ್ರಕಟಗೊಂಡ ಬೆನ್ನಲ್ಲೇ ಗೋಕಾಕ ಪೊಲೀಸರು ಎಚ್ಚೆತ್ತುಕೊಂಡು ನಗರದಲ್ಲಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿರುವವರ ಮಾಹಿತಿಯನ್ನು ಸಂಗ್ರಹಿಸಿ ಪೊಲೀಸ ಠಾಣೆಗೆ ಕರೆದು ಪೂಲ್ ವಾರ್ನಿಂಗ ಮಾಡಿದ್ದಾರೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಪೊಲೀಸರ ಕರೆಗೆ ನಿದ್ದೆ ಗೆಟ್ಟಿರುವ ನಗರದ ಕೆಲ ಕ್ರಿಕೆಟ್ ಬುಕ್ಕಿಗಳು ತಲೆ ಮರಿಸಿಕೊಂಡಿದ್ದಾರೆಂದು ಹೆಳಲಾಗುತ್ತಿದ್ದು, ಸಿಕ್ಕ ಕೆಲವರನ್ನು ಗೋಕಾಕ ಡಿ.ವಾಯ್.ಎಸ್.ಪಿ ಠಾಣೆಗೆ ಕರೆದು ವಾರ್ನಿಂಗ ಮಾಡಿದ್ದಾರೆಂದು ತಿಳಿದು ಬಂದಿದೆ.
ಒಟ್ಟಾರೆ ಹಲವು ವರ್ಷಗಳಿಂದ ರಾಜ್ಯದಲ್ಲಿ ಸದ್ದು ಮಾಡಿದ್ದ ಗೋಕಾಕ ಬೆಟ್ಟಿಂಗ್ ಮಾಫಿಯಾದ ಸುದ್ದಿ ಮುಂದಿನ ದಿನಗಳಲ್ಲಿ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದನ್ನು ಕಾಲವೇ ನಿರ್ಧರಿಸಲಿದೆ .