RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ನಗರದಲ್ಲಿ ಶ್ರದ್ಧಾ ಭಕ್ತಿಯ ಮೊಹರಂ ಆಚರಣೆ

ಗೋಕಾಕ:ನಗರದಲ್ಲಿ ಶ್ರದ್ಧಾ ಭಕ್ತಿಯ ಮೊಹರಂ ಆಚರಣೆ 

ನಗರದಲ್ಲಿ ಶ್ರದ್ಧಾ ಭಕ್ತಿಯ ಮೊಹರಂ ಆಚರಣೆ

ಗೋಕಾಕ ಜು 6 : ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ಮುಸ್ಲೀಮರ ಪವಿತ್ರ ಹಬ್ಬಗಳಲ್ಲಿ ಒಂದಾದ ಮೊಹರಂ ಹಬ್ಬವನ್ನು ರವಿವಾರದಂದು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಮೊಹರಂ ಕಡೇ ದಿನದ ಅಂಗವಾಗಿ ಸಾಯಂಕಾಲ ನಗರದ ವಿವಿಧ ಕಡೆಗಳಲ್ಲಿ ಸ್ಥಾಪಿಸಲಾದ ಪಂಜಾಗಳು ಮೆರವಣಿಗೆ ಮುಖಾಂತರ ಹಳೆ ದನಗಳ ಪೇಠೆಯಲ್ಲಿ ಸೇರಿ ಮುಲಾಕಾತ್ ಮಾಡಲಾಯಿತು.
ಪಂಜಾಗಳ ಮೀಲನವಾಗುತ್ತಿದ್ದಂತೆ ಭಕ್ತಾದಿಗಳು ಹಸೇನ ,ಹುಸೇನ್ ಕೀ ದೋಸ್ತರೊ ದ್ದೀನ್ ಎಂದು ಜಯಘೋಷವನ್ನು ಕೂಗಿ ಸಂಭ್ರಮ ಪಟ್ಟರು. ರಾತ್ರಿ 8 ಘಂಟೆಗೆ ನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ತಾಬೂತ (ದೇವರು) ಗಳ ವಿಸರ್ಜನೆ ಕಾರ್ಯಕ್ರಮ ನಡೆಯಿತು.
ಮುಲಾಕಾತ್ ನೋಡಲು ಹಿಂದೂ – ಮುಸ್ಲಿಂ ಭಾಂಧವರು ಸೇರುವುದರ ಮೂಲಕ ಭಾವೈಕ್ಯತೆ ಮೆರೆದರು.

Related posts: